ADVERTISEMENT

ಯೋಗಾಸನ ಸ್ಪರ್ಧೆ: ಶಿಲ್ಪಾ, ಸುಭಾಷ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಮಂಡ್ಯ: ಸ್ವಾಮಿ ವಿವೇಕಾನಂದ ಕನ್ನಡ ಯುವ ಬಳಗ ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಎನ್.ಸಿ.ಸುಭಾಷ್ `ಯೋಗ ಕುಮಾರ~ ಮತ್ತು ಎಂ.ಎಸ್.ಶಿಲ್ಪಾ `ಯೋಗ ಕುಮಾರಿ~ ಪ್ರಶಸ್ತಿಗೆ ಪಾತ್ರರಾದರು.

ಮೈಸೂರು ನಾರಾಯಣಗುರು ಯೋಗ ಮಂದಿರ ಟ್ರಸ್ಟ್‌ನ ಶಿಲ್ಪಾ ಮತ್ತು ನಂಜನಗೂಡಿನ ಅಷ್ಟಾಂಗ ಯೋಗ ವಿದ್ಯಾಲಯದ ಎನ್.ಸಿ.ಸುಭಾಷ್ ಆಸನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಧಿಕ ಅಂಕ ಗಳಿಸಿ, ಪ್ರಶಸ್ತಿಗೆ ಆಯ್ಕೆಯಾದರು.

ಮೈಸೂರು, ಮಂಡ್ಯ, ನಂಜನಗೂಡು, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳ 110ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ ಹಂತದ ಸ್ಪರ್ಧೆಗಳಲ್ಲಿ ಜಯಗಳಿಸಿ `ಯೋಗ ಕುಮಾರಿ~, `ಯೋಗ ಕುಮಾರ~ ಪ್ರಶಸ್ತಿಗಾಗಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ 8ರಿಂದ 60 ವರ್ಷದ ಸ್ಪರ್ಧಿಗಳು ಭಾಗವಹಿಸಿದ್ದು, ಪುರುಷ-ಮಹಿಳೆಯರಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಯಿತು. ಉಷ್ಟ್ರಾಸನ, ವೀರಭದ್ರಸಾನ, ಧನುರಾಸನ, ಸರ್ವಾಂಗಾಸನ, ಚಕ್ರಾಸನಗಳಲ್ಲಿ ಸ್ಪರ್ಧಿಗಳು ಮಂಡಿಸಿದ ಶಿಸ್ತು, ಆಸನದ ಶೈಲಿಯನ್ನು ಆಧರಿಸಿ ವಿಜೇತರ ಆಯ್ಕೆ ನಡೆಯಿತು.

ಸ್ವಾಮಿ ವಿವೇಕಾನಂದ ಕನ್ನಡ ಯುವ ಸೇನೆ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ ಮತ್ತು ಡಾ.ರಾಜ್‌ಕುಮಾರ್ ನೆನಪಿನಲ್ಲಿ ಈ ಸ್ಪರ್ಧೆಆಯೋಜಿಸಿತ್ತು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮಹೇಶ್, ಎಸ್.ಡಿ.ಜಯರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಶೋಕ್ ಎಸ್.ಡಿ. ಜಯರಾಂ, ನಗರಸಭೆ ಅಧ್ಯಕ್ಷ ಅರುಣ್‌ಕುಮಾರ್, ಕಾರ್ಯಕ್ರಮದ ಸಂಘಟಕ ಕೆ.ಚಂದ್ರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.