ಹುಬ್ಬಳ್ಳಿ: ರೈಲು ಪ್ರಯಾಣಕ್ಕೆ ಅಂತರ್ಜಾಲ ಮುಖೇನ ಸೀಟು ಕಾಯ್ದಿರಿಸುವ ಪ್ರಯಾಣಿಕರು ಇನ್ನು ಮುಂದೆ ಮುದ್ರಿತ ಟಿಕೆಟ್ಗೆ ಬದಲಾಗಿ ರೈಲ್ವೆ ವೆಬ್ಸೈಟ್ನಿಂದ ತಮ್ಮ ಮೊಬೈಲುಗಳಿಗೆ ಬರುವ ಟಿಕೆಟ್ ಕಾಯ್ದಿರಿಸುವಿಕೆ ಸಂದೇಶ (ಎಸ್ಎಂಎಸ್)ವನ್ನೇ ಅಧಿಕೃತ ಇ-ಟಿಕೆಟ್ ಎಂದು ಬಳಸಬಹುದಾಗಿದೆ.
ನೈರುತ್ಯ ರೈಲ್ವೆಯು ಈ ಕುರಿತು ಪ್ರಕಟಣೆ ನೀಡಿದೆ. ಅದರಂತೆ ಐಆರ್ಸಿಟಿಸಿಯಿಂದ ಬರುವ ಸಂದೇಶವನ್ನು ಟಿಕೆಟ್ ಆಗಿ ಬಳಸಬಹುದಾಗಿದೆ. ಈ ಸಂದೇಶವು ಪಿಎನ್ಆರ್ ಸಂಖ್ಯೆ, ಪ್ರಯಾಣಿಸುವ ರೈಲು ಸಂಖ್ಯೆ, ಪ್ರಯಾಣದ ದಿನಾಂಕ, ಪ್ರಯಾಣಿಕರ ಹೆಸರು ಹಾಗೂ ದರವನ್ನು ಒಳಗೊಂಡಿರುತ್ತದೆ.
ಇದರೊಟ್ಟಿಗೆ ತಮ್ಮ ಭಾವಚಿತ್ರ ಇರುವ ಗುರುತುಪತ್ರವನ್ನು ತಪಾಸಣೆಯ ಹಾಜರುಪಡಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.