ADVERTISEMENT

ರೈಲ್ವೆ ನಿಲ್ದಾಣಗಳಲ್ಲಿ ಕ್ಯೂ ಮ್ಯಾನೇಜ್‌ಮೆಂಟ್ ಸಿಸ್ಟಂ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2011, 19:30 IST
Last Updated 23 ಮಾರ್ಚ್ 2011, 19:30 IST

ಶಿವಮೊಗ್ಗ: ಶಿವಮೊಗ್ಗ, ಹಾಸನ, ದಾವಣಗೆರೆ ರೈಲ್ವೆ ನಿಲ್ದಾಣಗಳಲ್ಲಿ ಶೀಘ್ರದಲ್ಲಿಯೇ ‘ಕ್ಯೂ ಮ್ಯಾನೇಜ್‌ಮೆಂಟ್ ಸಿಸ್ಟಂ’ ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ (ವಾಣಿಜ್ಯ) ವ್ಯವಸ್ಥಾಪಕ ದಯಾನಂದ್ ಸಾಧು ತಿಳಿಸಿದರು. ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೈಸೂರು ವಿಭಾಗದ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಯ್ದಿರಿಸಿದ ಟಿಕೆಟ್ ಪಡೆಯಲು ನೂತನ ವ್ಯವಸ್ಥೆ ತರಲಾಗಿದೆ.

ಪ್ರಯಾಣಿಕರು ನಿಲ್ದಾಣದಲ್ಲಿ ಅಳವಡಿಸಿದ ಯಂತ್ರದ ಗುಂಡಿಯನ್ನು ಒತ್ತಿ ಟೋಕನ್ ಪಡೆಯಬೇಕು. ನಂತರ ಕೆಲ ಹೊತ್ತಿನಲ್ಲಿ ಆ ಟೋಕನ್ ನಂಬರ್ ಫಲಕದ ಮೇಲೆ ನಮೂದಾಗುತ್ತದೆ. ಆಗ, ಕೌಂಟರ್‌ಗೆ ಹೋಗಿ ಟಿಕೆಟ್ ಪಡೆಯಬಹುದು ಎಂದು ತಿಳಿಸಿದರು. ‘ಕ್ಯೂ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ’ ಈ ಮೊದಲು ಮೈಸೂರಿನಲ್ಲಿ ಮಾತ್ರ ಇತ್ತು. ಇದರಲ್ಲಿ ಕಾಯ್ದಿರಿಸಿದ ಟಿಕೆಟ್ ಮಾತ್ರ ಪಡೆಯಲು ಅವಕಾಶವಿರುತ್ತದೆ. ಇದರಿಂದ ಗಂಟೆಗಟ್ಟಲೇ ಪ್ರಯಾಣಿಕರು ಸಾಲಿನಲ್ಲಿ ನಿಲ್ಲುವ ಗೋಜಲು ತಪ್ಪಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.