ADVERTISEMENT

ವರೂರಿನಲ್ಲಿ 25ರಿಂದ ಮಹಾ ಮಸ್ತಕಾಭಿಷೇಕ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 16:25 IST
Last Updated 19 ಫೆಬ್ರುವರಿ 2011, 16:25 IST

ಹುಬ್ಬಳ್ಳಿ: ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ, ಭ್ರಷ್ಟಾಚಾರ ನಿವಾರಣೆಗಾಗಿ ಮಹಾ ಮೃತ್ಯುಂಜಯ ಜಪ ಮತ್ತು ಮಹಾ ಮಸ್ತಕಾಭಿಷೇಕ ಕಾರ್ಯಕ್ರಮ ವರೂರಿನ ನವಗ್ರಹ ತೀರ್ಥದಲ್ಲಿ ಫೆ.25ರಿಂದ 27ರವರೆಗೆ ಶ್ರೀ ಗುಣಧರನಂದಿ ಮಹಾರಾಜರ ಸಾನ್ನಿಧ್ಯದಲ್ಲಿ ನಡೆಯಲಿದೆ. ಧರ್ಮಸೇನ ಭಟ್ಟಾಕರ ಶ್ರೀಗಳು ನೇತೃತ್ವ ವಹಿಸುವರು.

ಫೆ.25ರ ಬೆಳಿಗ್ಗೆ 108 ಕುಂಭಗಳಿಂದ ಪಾದಪೂಜೆ, ಮಧ್ಯಾಹ್ನ 11ಕ್ಕೆ ರಂಗೋಲಿ ಸ್ಪರ್ಧೆ ಹಾಗೂ ಲೋಕ ಕಲ್ಯಾಣಾರ್ಥ ನವಗ್ರಹ, ಮಹಾ ಮೃತ್ಯುಂಜಯ ಜಪ, 2ಗಂಟೆಗೆ ಧಾರ್ಮಿಕ ರಾಜಕೀಯ ಹಾಗೂ ಪೂಜ್ಯರಿಂದ ಧರ್ಮ ಸಂದೇಶ ಏರ್ಪಾಡಾಗಿವೆ. ರಾತ್ರಿ 7ಕ್ಕೆ ಶಾಲಾ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಫೆ.26ರ ಬೆಳಿಗ್ಗೆ ಅಷ್ಟದ್ರವ್ಯದಿಂದ ಪೂಜಾ ಅರ್ಚನೆ, ಪ್ರವಚನ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಫೆ. 27ರ ಬೆಳಿಗ್ಗೆ ಹವನ ಹಾಗೂ ಮಹಾಮಸ್ತಕಾಭಿಷೇಕ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ. ಶಾಸಕರಾದ ಎಸ್.ಐ. ಚಿಕ್ಕನಗೌಡ್ರ, ಸಂಜಯ ಪಾಟೀಲ ಮತ್ತು ಅಭಯ ಪಾಟೀಲ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.