ADVERTISEMENT

ಸಂಚಾರ ತಾತ್ಕಾಲಿಕ ನಿಷೇಧ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

ಚಾಮರಾಜನಗರ: ಜಿಲ್ಲೆಯ ಮೂಲಕ  ವೈನಾಡು, ಕೋಯಿಕೋಡ್‌ಗೆ ಹೋಗುವ  ರಾಷ್ಟ್ರೀಯ ಹೆದ್ದಾರಿ-212ರಲ್ಲಿ ತುರ್ತು ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ  ಒಂದು ತಿಂಗಳು ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಹೆದ್ದಾರಿಯ ಬದಲು ಇತರ 5 ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ.

ವೈನಾಡು- ಕೋಯಿಕೋಡ್ ರಸ್ತೆಯ ಬಹುತೇಕ ಭಾಗ ಮಳೆ ಹಾಗೂ ವಾಹನಗಳ ಸಂಚಾರದಿಂದ ಹದಗೆಟ್ಟಿದೆ. ಹೀಗಾಗಿ, ತುರ್ತು ಕಾಮಗಾರಿ ಕೈಗೊಳ್ಳಲು ಜ. 2ರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಬಗ್ಗೆ ಕೋಯಿಕೋಡ್ ಜಿಲ್ಲಾಧಿಕಾರಿ ಪಿ.ಬಿ. ಸಲೀಂ ಆದೇಶ ಹೊರಡಿಸಿದ್ದಾರೆ.

ಇದಕ್ಕೆ ಪರ್ಯಾಯವಾಗಿ ಮೈಸೂರು- ಗೋಣಿಕೊಪ್ಪ- ತಲಚೇರಿ, ಬಾವಲಿ- ಮಾನಂದವಾಡಿ- ತಲಚೇರಿ, ಕಲ್ಪೆಟ್ಟ-ನಿಲಂಬೂರ್, ಗುಂಡ್ಲುಪೇಟೆ- ಪಾಲಕ್ಕಾಡ್, ಕಲ್ಪೆಟ್ಟ- ವೈತಿರಿ- ತರಿವಣ- ಕುಟ್ಟಿಯಾಡಿ ಮಾರ್ಗದಲ್ಲಿ ವಾಹನಗಳು ಸಂಚರಿಸಲು ಕೋಯಿಕೋಡ್ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ ಎಂದು ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.