ಗುಲ್ಬರ್ಗ:ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಂದಾಕಿನಿ ಎಸ್. ಎಕಲೂರೆ ಅತ್ಮಹತ್ಯೆಗೆ ಕಾರಣವಾಗಿರುವ ಗುಲ್ಬರ್ಗ ತಾಲ್ಲೂಕಿನ ಸಣ್ಣೂರ ಗ್ರಾಮ ಪಂಚಾಯಿತಿ ಜನಪ್ರತಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮ ಪಂಚಾಯಿತಿ ಸೂಪರ್‌ಸೀಡ್ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಪಿಡಿಒ ಅಧಿಕಾರಿಗಳು ಇಲ್ಲಿನ ಮಂದಾಕಿನಿ ಮನೆ ಎದುರಿನ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಡೆದಿರುವ ದಾರುಣ ಘಟನೆ ಇದಾಗಿದ್ದು, ಮಹಿಳಾ ಪಿಡಿಒಗಳು ಕಾರ್ಯನಿರ್ವಹಿಸುವ ಸ್ಥಳದಲ್ಲಿ ಯಾವುದೇ ರಕ್ಷಣೆ ಇರುವುದಿಲ್ಲ. ಇದು ಕೇವಲ ಮಂದಾಕಿನಿ ಕಥೆಯಲ್ಲ. ಇಡೀ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಡಿಒಗಳ ಕಥೆಯೂ ಇದೇ ರೀತಿಯದ್ದಾಗಿದೆ ಎಂದು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ವಿಶ್ಲೇಷಿಸಿದ್ದಾರೆ.
ಕಾಮಗಾರಿ ಚೆಕ್‌ಗಳ ಮೇಲೆ ಪಿಡಿಒ ಅಥವಾ ಗ್ರಾಪಂ ಅಧ್ಯಕ್ಷರೊಬ್ಬರೆ ಸಹಿ ಮಾಡುವ ಅವಕಾಶ ನೀಡಬೇಕು. ಪಂಚಾಯಿತಿ ಮಟ್ಟದಲ್ಲಿ ನಡೆಯುವ ದೌರ್ಜನ್ಯ ಪ್ರಕರಣದ ಸಂದರ್ಭದಲ್ಲಿ ಪಿಡಿಒಗಳ ವರದಿ ಆಧರಿಸಿ ಮೇಲಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.