ADVERTISEMENT

ಸಾಹಿತ್ಯ, ಸಂಸ್ಕೃತಿ ಅರಿವು ಅಗತ್ಯ: ಗೊ.ರು.ಚ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಜೇವರ್ಗಿ: ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅವರ ಭಾಗದಲ್ಲಿರುವ ಪ್ರಚಲಿತ ವಿದ್ಯಮಾನಗಳು, ಸಾಹಿತ್ಯ, ಗ್ರಾಮೀಣ ಕಲೆಗಳು ಹಾಗೂ ಸಂಸ್ಕೃತಿಯ ಅರಿವು ಅಗತ್ಯ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನಬಸಪ್ಪ ಅಭಿಪ್ರಾಯಪಟ್ಟರು.

ಅವರು ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಆಯೋಜಿಸಿದ್ದ ಗುಲ್ಬರ್ಗ ಜಿಲ್ಲಾ ಜಾನಪದ ಸಂಭ್ರಮ-2011 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ 10.30ಕ್ಕೆ ಪಟ್ಟಣದ ಬಸವೇಶ್ವರ ವೃತ್ತದಿಂದ-ತಹಸೀಲ್ದಾರ್ ಕಚೇರಿವರೆಗೆ ಜಾನಪದ ಕಲಾ ತಂಡಗಳಿಂದ ಮೆರವಣಿಗೆ ನಡೆಯಿತು. ಜಾನಪದ ಕಲಾ ತಂಡಗಳು ಆಕರ್ಷಕ ನೃತ್ಯ, ಡೊಳ್ಳಿನ ಕುಣಿತ  ನೆರೆದ ಜನರ ಗಮನ ಸೆಳೆದವು.

 ಜಾನಪದ ಸಾಹಿತಿ ಡಾ.ಎಂ.ಎಸ್. ವಾಲಿ ಆಶಯ ನುಡಿ ಪ್ರಸ್ತುತಪಡಿಸಿದರು. ಜಾನಪದ ಸಾಹಿತಿ ಡಾ.ಚಕ್ಕೆರೆ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು.

ಜನಪದ ಗದ್ಯ ಸಾಹಿತ್ಯ ಎಂಬ ವಿಷಯದ ಬಗ್ಗೆ ಡಾ. ಶ್ರೀಶೈಲ ನಾಗರಾಳ, ಜನಪದ ಪದ್ಯ ಸಾಹಿತ್ಯದ ಬಗ್ಗೆ ಡಾ.ಹನುಮಂತರಾವ್ ದೊಡ್ಡಮನಿ, ಜನಪದ ಸಂಕೀರ್ಣ ಸಾಹಿತ್ಯದ ಬಗ್ಗೆ ಪ್ರೊ. ಸೂಗಯ್ಯ ಹಿರೇಮಠ ವಿಷಯ ಮಂಡಿಸಿದರು. ಅಪ್ಪಾಸಾಬ ಕೋಳಕೂರ ಕಾರ್ಯಕ್ರಮವನ್ನು ನಿರ್ವಹಿಸಿದರು.

ನಂತರ ಜಾನಪದ ಕಲಾವಿದರೊಂದಿಗೆ ಅಕಾಡೆಮಿ ಅಧ್ಯಕ್ಷರು ವಿಚಾರ-ವಿನಿಮಯ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.