ADVERTISEMENT

ಹಂಪಿ ವರ, ಪೋಲೆಂಡ್ ವಧು...

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಹಂಪಿ (ಹೊಸಪೇಟೆ): ಜಾತಿ, ದೇಶ, ಭಾಷೆ ಮೀರಿದ ಪ್ರೇಮವು ವಿವಾಹದಲ್ಲಿ ಕೊನೆಗೊಂಡ ಘಟನೆ ಇಲ್ಲಿ ನಡೆದಿದೆ. ಹಂಪಿಯ ಹುಡುಗ ಹಾಗೂ ಪೋಲೆಂಡ್ ಹುಡುಗಿ ಮಂಗಳವಾರ ಸಂಜೆ ಶಾಸ್ತ್ರೋಕ್ತವಾಗಿ ಮದುವೆಯಾದರು.

ಹಂಪಿಯಲ್ಲಿ ವಿದೇಶಿ ಪ್ರವಾಸಿಗರಿಗೆ `ಪ್ರವಾಸಿ ಮಾರ್ಗದರ್ಶಕ~ನಾಗಿ (ಗೈಡ್) ಕೆಲಸ ಮಾಡುತ್ತಿದ್ದ ಶಿವಕುಮಾರ ಶೇಖರ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಮೆಚ್ಚುಗೆ ಹಾಗೂ ಗೌರವ ಹೊಂದಿದ ಪೋಲೆಂಡ್‌ನ ಶಿಕ್ಷಕಿಯಾಗಿದ್ದ  ಮಾಲಗೋರ‌್ಜಾತ ದುಸುಕಿ ಅವರನ್ನು ಭಾರತೀಯ ಸಂಪ್ರದಾಯದಂತೆ ಮದುವೆಯಾದರು.
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಈ ಮದುವೆ ನಡೆಯಿತು.

ಮೂರನೇ ಬಾರಿಗೆ ಭಾರತಕ್ಕೆ ಬಂದಿರುವ ದುಸುಕಿ ಪ್ರತಿ ಬಾರಿಯೂ ಹಂಪಿಗೂ ಬಂದಿದ್ದಾರೆ. ಎರಡನೇ ಬಾರಿ ಬಂದಾಗಲೇ ಪ್ರೇಮಬಂಧನದಲ್ಲಿ ಸಿಲುಕಿದ್ದರಂತೆ. ತಮ್ಮ ಮನೆಯವರ ಅನುಮತಿ ಪಡೆದಿರುವ ಅವರು ಈ ಬಾರಿಯ ಭೇಟಿ ಸಂದರ್ಭದಲ್ಲಿ ಮದುವೆಯಾದರು.

ವೃದ್ಧ ತಾಯಿಯನ್ನು ಹೊಂದಿರುವ ದುಸುಕಿ ಅವರು ಭಾರತದಲ್ಲಿ ಹಾಗೂ ಪೋಲೆಂಡ್‌ನಲ್ಲಿ ಸ್ವಲ್ಪದಿನ ಕಳೆಯುವುದಾಗಿ ಹೇಳಿದರು. ಹಂಪಿ ನಿವಾಸಿಗಳು ಹಾಗೂ ಶೇಖರ ಅವರ ಸ್ನೇಹಿತರು, ಕೆಲ ವಿದೇಶಿ ಪ್ರವಾಸಿಗರು ವಿವಾಹದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.