ADVERTISEMENT

ಹೊಳಲ್ಕೆರೆ: ಕಾಡುಪ್ರಾಣಿ ದಾಳಿಗೆ 20 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 19:30 IST
Last Updated 3 ಜೂನ್ 2011, 19:30 IST

ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ಕಾಡು ಪ್ರಾಣಿಗಳು ದಾಳಿ ಮಾಡಿದ ಪರಿಣಾಮ 20 ಕುರಿಗಳು ಸಾವನ್ನಪ್ಪಿ, ಸುಮಾರು 100 ಕುರಿಗಳು ಕಾಣೆಯಾದ ಘಟನೆ ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದಿದೆ.

ಹಿರಿಯೂರು ತಾಲ್ಲೂಕು ಮಾರಿಕಣಿವೆ ಸಮೀಪದ ದೊಡ್ಡಘಟ್ಟ ಗ್ರಾಮದ ಯಶೋದಮ್ಮ, ತಿಪ್ಪೇಶ್, ಶೇಖರಪ್ಪ ಮತ್ತು ಸೀನಪ್ಪ ಎಂಬುವವರು ಸುಮಾರು 2,500 ಕುರಿಗಳನ್ನು ಗುಡ್ಡದ ಸಾಂತೇನಹಳ್ಳಿಯ ಹೊಲವೊಂದರಲ್ಲಿ ಮಂದೆ ನಿಲ್ಲಿಸಿದ್ದರು.

ಗುರುವಾರ ಇಲ್ಲಿನ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಧಾರಾಕಾರ ಮಳೆ ಸುರಿಯುವ ವೇಳೆಯಲ್ಲಿ ಈ ಘಟನೆ ನಡೆದಿದೆ.

ಒಂದೆರಡು ಕುರಿಗಳನ್ನು ಮಾತ್ರ ಪೂರ್ಣವಾಗಿ ತಿಂದಿರುವ ಕಾಡು ಪ್ರಾಣಿಗಳು, ಉಳಿದ ಕುರಿಗಳ ಕುತ್ತಿಗೆ ಭಾಗದಲ್ಲಿ ರಕ್ತ ಹೀರಿ ಬಿಟ್ಟು ಹೋಗಿವೆ. ಕಿರುಬ, ಚಿರತೆ ಇಲ್ಲವೇ ಹುಲಿಗಳು ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT