ADVERTISEMENT

ಅದ್ದೂರಿ ಮರಗಮ್ಮದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 10:05 IST
Last Updated 19 ಜುಲೈ 2012, 10:05 IST

ಬಾಗಲಕೋಟೆ: ನವನಗರದ ಗವಳಿ ಭವಾನಿ ಯುವಕ ಸಮಾಜದಿಂದ ಮರಗಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನವನಗರದ ಹಳೆ ಆರ್.ಟಿ.ಒ. ವೃತ್ತದಿಂದ ಸಕಲ ವಾದ್ಯ,  ಮಹಿಳೆಯರ ಕುಂಭಮೇಳದೊಂದಿಗೆ ದೇವರ ಮೆರವ ಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಸೆಕ್ಟರ್ ನಂ.29ರಲ್ಲಿರುವ ಮರಗಮ್ಮದೇವಿ ದೇವಸ್ಥಾನಕ್ಕೆ ತಲುಪಿತು.

ಬಳಿಕ ಗವಳಿ ಸಮಾಜದ ಹಿರಿಯ ಮುಖಂಡರಿಗೆ ಕೆಂಪು ಪೇಟಾ ಧರಿಸಿ ಕೋಲಾಟ ಆಡಿಸಲಾಯಿತು. ಬರಗಾಲದ ಹಿನ್ನಲೆಯಲ್ಲಿ ಮರಗಮ್ಮ ದೇವಸ್ಥಾನದಲ್ಲಿ ಸೇರಿದ ಮಹಿಳೆಯರು ಸಮಾಜದ ಮುಖಂಡರು, ಯುವಕರು ಮಳೆಗಾಗಿ ಪ್ರಾರ್ಥಿಸಿದರು.

ಜಾತ್ರಾ ಮಹೋತ್ಸವದದಲ್ಲಿ ಶಾಸಕ ವೀರಣ್ಣ ಚರಂತಿಮಠ,  ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಸಿದ್ದಪ್ಪ ಕಿರ್ಲೋಸ್ಕರ್, ನಾಗೋಜಿ ಲಂಗೋಟೆ, ಬಾಬು ಗಡೆಪ್ಪ, ಮಾರುತಿ ಕಿರ್ಲೋಸ್ಕರ್, ಕಿಸನ್ ಗಡೆಯಪ್ಪ, ಅಂಬಾಜಿ ಕಿರ್ಲೋಸ್ಕರ್, ರಾಮ ಲಂಗೋಟೆ, ರಾಜು ಲಂಗೋಟೆ, ಚಂದ್ರು, ರಾಮ, ವಿಠ್ಠಲ, ರಾಜು ಗಡೆಪ್ಪ (ಗವಳಿ) ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.