ADVERTISEMENT

ಇಳಕಲ್: ಭಾಗ್ಯಲಕ್ಷ್ಮಿಬಾಂಡ್ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 9:05 IST
Last Updated 5 ಮಾರ್ಚ್ 2012, 9:05 IST

ಇಳಕಲ್: ಬಡವರಿಗಾಗಿ, ಮಹಿಳೆಯರಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಫಲಾ ನುಭವಿಗಳು ಯಾವುದೇ ಮಧ್ಯವರ್ತಿಯನ್ನು ಅವಲಂಬಿಸದೇ, ಸಂಬಂಧಿಸಿದ ಇಲಾಖೆಯಿಂದ ನೇರ ವಾಗಿ ಪಡೆಯಬೇಕು. ಅಧಿಕಾರಿಗಳು ಕೂಡಾ ಸೌಲಭ್ಯ ಗಳನ್ನು ಜನರಿಗೆ ಪ್ರಮಾಣಿಕವಾಗಿ ತಲುಪಿಸಬೇಕು. ನ್ಯೂನತೆ ಕಂಡು ಬಂದರೆ ಸಹಿಸುವದಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಅವರು ಇಲ್ಲಿಯ ಅನುಭವ ಮಂಡಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಭಾಗ್ಯಲಕ್ಮೀ ಬಾಂಡ್ ವಿತರಣೆ ಹಾಗೂ ನಿವೃತ್ತ ಅಂಗನವಾಡಿ ಸಹಾಯಕಿಯರಿಗೆ ಚೆಕ್ ವಿತರಿಸಿ ಮಾತನಾಡಿದರು.

ನಾನು ಶಾಸಕತ್ವವನ್ನು ಅಧಿಕಾರ ಎಂದು ಭಾವಿಸಿಲ್ಲ. ತಲುಪಬೇಕಾದವರಿಗೆ ಸರಕಾರದ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪೋಸ್ಟಮನ್ ಎಂದು ಕೊಂಡಿದ್ದೇನೆ. ಜನತೆಗೆ ಸೌಲಭ್ಯ ತಲುಪಿಸುವ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವಾಗ ಯಾವ ಗಣ್ಯ ಮಾನ್ಯರ ಬೆದರಿಕೆಗೂ ಹೆದರಬೇಡಿ. ಸರಿಯಾದ ದಿಕ್ಕಿ ನಲ್ಲಿ ಸಾಗುತ್ತಿರುವಾಗ ಯಾರ ಮಾತು ಕೇಳಬೇಡಿ. ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಯಿಸಿ. ಎಂದು ಅಧಿಕಾರಿಗಳಿಗೆ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎಸ್.ಎಸ್.ಪಾಟೀಲ ಮಾತ ನಾಡಿ, ಇಂದಿನ ಸಮಾರಂಭದಲ್ಲಿ 1600 ಭಾಗ್ಯಲಕ್ಮೀ  ಬಾಂಡ್, ನಿವೃತ್ತರಾದ ಅಂಗನವಾಡಿ ಸಹಾಯಕಿ ಯರಿಗೆ ಇದೇ ಮೊದಲ ಬಾರಿಗೆ ತಲಾ 30 ಸಾವಿರ ಚೆಕ್, ಮೃತರಾದ ಅಂಗನವಾಡಿ ಸಹಾಯಕಿಯರ ಕುಟುಂಬಗಳಿಗೆ 20 ಸಾವಿರ ರೂ.ಗಳ ಚೆಕ್ ವಿತರಿಸಲಾಗುತ್ತಿದೆ.

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗಿ ಯೋಜನೆಯಡಿಯೂ 7,500 ರೂ.ಗಳ ಸಹಾಯಧನವನ್ನು ಸಹ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಅತಿಥಿಯಾಗಿದ್ದ ಜಿ.ಪಂ ಸದಸ್ಯ ಮಹಾಂತೇಶ ನರಗುಂದ, ಹುನಗುಂದ ಪ.ಪಂ ಅಧ್ಯಕ್ಷ ಬಸಪ್ಪ ಆಲೂರ, ತಾ.ಪಂ ಉಪಾಧ್ಯಕ್ಷ ಶಂಕ್ರಪ್ಪ ನೇಗಲಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ವಿಜಯಾ ಬಂಡಿ, ಉಪಾಧ್ಯಕ್ಷ ಹಾಸೀಮ ಬಾಗವಾನ, ತಾ.ಪಂ ಅಧ್ಯಕ್ಷೆ ಶರಣಪ್ಪ ಮಾಟೂರ, ಚೋಳಪ್ಪ ಇಂಡಿ, ಕುಸುಮಾ ಮಾಗಿ, ಮೋಹನ ಹೊಸಮನಿ, ಶ್ಯಾಮಸುಂದರ ಕರವಾ, ಮಹಾಂತಪ್ಪ ಚೆನ್ನಿ ಮತ್ತೀತರರು ಉಪಸ್ಥಿತ ರಿದ್ದರು.

ಪುರಾಣಿಕಮಠ ಪ್ರಾರ್ಥಿಸಿದರು. ಶಿಶು ಅಭಿವೃದ್ಧಿ ಅಧಿಕಾರಿ ಆರ್.ಎಸ್.ನಧಾಫ್ ಸ್ವಾಗತಿಸಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸತೀಶ ನಾಯಕ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.