ADVERTISEMENT

ಉತ್ತಮ ಮಳೆ:ತುಂಬಿ ಹರಿಯುತ್ತಿರುವ ಮಲಪ್ರಭೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 9:35 IST
Last Updated 10 ಆಗಸ್ಟ್ 2012, 9:35 IST

ಕೆರೂರ :  ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದ ಮೇಲಿನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ  ಜಿಲ್ಲೆಯ ಗಡಿ ಭಾಗ ಗೋವನಕೊಪ್ಪ ಗ್ರಾಮದ ಬಳಿ ಹರಿದಿರುವ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು ಒಂ ದು ವೇಳೆ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಾದರೆ ವಿಜಾಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ (218) ಸಂಚಾರಕ್ಕೆ ತೊಂದರೆ ಎದುರಾಗಬಹುದು.

ಗುರುವಾರ ಬೆಳಿಗ್ಗೆ 51.20 ಇದ್ದ ನೀರಿನ ಮಟ್ಟ ಈಗ 51.60 ಕ್ಕೆ ಏರಿಕೆಯಾಗಿದ್ದು, ಜಲಾಶಯದಿಂದ ಮಲಪ್ರಭಾ ನದಿಗೆ 1600 ಕ್ಯೂಸೆಕ್ ನೀರನ್ನು ರೋಣ ತಾಲ್ಲೂಕಿನಲ್ಲಿಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಆದೇಶದ ಮೆರೆಗೆ ಹರಿಬಿಡಲಾಗುತ್ತಿದೆ ಎಂದು ಎಇಇ ಎಸ್.ಜಿ.ಲಕ್ಕುಂಡಿ ಪ್ರಜಾವಾಣಿಗೆ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.