ಜಮಖಂಡಿ: ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳೆರಡ ರಲ್ಲೂ ಸಾಕಷ್ಟು ಉದ್ಯೋಗಾವಕಾಶಗಳು ಇವೆ. ಆದರೆ ಉದ್ಯೋಗಶೀಲ ಪದವೀಧರರ ಕೊರತೆ ಇದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಪ್ರಾಧ್ಯಾಪಕ ಮಹಾಂತೇಶ ಕುರಿ ಅಭಿಪ್ರಾಯ ಪಟ್ಟರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯ ಮತ್ತು ಕಾರ್ಯನಿರ್ವಹಣಾ ವಿಭಾಗಗಳ ಅಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ `ಜೀವನವೃತ್ತಿ ಅಭಿವೃದ್ಧಿ~ ಹಾಗೂ `ಇ-ಬ್ಯಾಂಕಿಂಗ್~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಗಿಟ್ಟಿಸಿಕೊಳ್ಳಲು ಇಂದಿನ ಪದವೀ ಧರರು ಸಂವಹನ ಕಲೆ ಮೈಗೂಡಿಸಿಕೊಳ್ಳುವುದು, ಇಂಗ್ಲಿಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡು ವುದನ್ನು ಕಲಿಯುವುದು ಮತ್ತು ಉತ್ತಮ ನಡವಳಿಕೆ ಬೆಳೆಸಿಕೊಳ್ಳುವುದು ಅಗತ್ಯವಿದೆ. ಉದ್ಯೋಗ ಮಾಡು ವ ಸಂಸ್ಥೆಯ ಸಂಸ್ಕೃತಿಯನ್ನು ಅರಿತು ಅದಕ್ಕನು ಗುಣವಾಗಿ ವ್ಯಕ್ತಿತ್ವ ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ ಎಂದರು.
ಎಕ್ಸಿಸ್ ಬ್ಯಾಂಕ್ ಸ್ಥಳೀಯ ಶಾಖೆಯ ವ್ಯವಸ್ಥಾಪಕ ಅನಂತ ಕುಲಕರ್ಣಿ ಮಾತನಾಡಿ, ಇಂಟರ್‌ನೆಟ್ ತಂತ್ರಜ್ಞಾನ ಬಳಸಿಕೊಂಡು ಮನೆಯಲ್ಲಿ ಕುಳಿತು ಬ್ಯಾಂಕುಗಳ ಜೊತೆಗೆ ವ್ಯವಹಾರ ಮಾಡುವ ಇ- ಬ್ಯಾಂಕಿಂಗ್ ವ್ಯವಸ್ಥೆ ಭಾರತ ದೇಶಕ್ಕೆ ಹೊಸದೆನಿಸಿ ದರೂ ಸಹ ಪ್ರಪಂಚದ ಇತರ ದೇಶಗಳಲ್ಲಿ ಆ ವ್ಯವಸ್ಥೆಗೆ ಶತಮಾನಗಳ ಇತಿಹಾಸವಿದೆ ಎಂದರು.
ಪ್ರಾಚಾರ್ಯೆ ಬಿ.ಯಶೋದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಲಾವಣೆಯಲ್ಲಿರುವ ನಾಣ್ಯದಂತಾಗಲು ಆಂತರಿಕ ಮತ್ತು ಬಾಹ್ಯ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಬಿಎಲ್‌ಡಿಇಎ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಟಿ.ಪಿ.ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಲಭ್ಯವಿರುವ ಸೌಲಭ್ಯಗಳ ಅರಿವು ಇದ್ದಾಗ ಮಾತ್ರ ಅವುಗಳ ಬಳಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಿಕೊಂಡ ವಿಷಯಗಳು ಸೂಕ್ತವಾಗಿವೆ ಎಂದರು.
ಪ್ರೊ.ಎಸ್.ಎಸ್.ಹಳೇಮನಿ, ಪ್ರೊ.ಎಲ್.ಎಸ್. ಕೋರೆ, ಗಾಯಿತ್ರಿ ತುಂಗಳ ವೇದಿಕೆಯಲ್ಲಿದ್ದರು. ರಾಜಶ್ರೀ ಕೊಹಿನೂರ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಜಾ ಶೆಟ್ಟಿ ಸ್ವಾಗತಿಸಿದರು. ಕವಿತಾ ಕೊಣ್ಣೂರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ವಿಜಯಲಕ್ಷ್ಮೀ ಹೊಸಮನಿ ನಿರೂಪಿಸಿದರು. ಶಿಲ್ಪಾ ಬಣಕಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.