ADVERTISEMENT

‘ಕಾಂಗ್ರೆಸ್ ಗೆಲ್ಲಿಸಿದರೆ ಮಾದರಿ ಕ್ಷೇತ್ರ ನಿರ್ಮಾಣ’

​ಪ್ರಜಾವಾಣಿ ವಾರ್ತೆ
Published 6 ಮೇ 2018, 6:49 IST
Last Updated 6 ಮೇ 2018, 6:49 IST

ಗುಳೇದಗುಡ್ಡ: ಕಾಂಗ್ರೆಸ್ ಸರ್ಕಾರ ಜನಪರವಾದಂತ ಕಾಳಜಿ ಇಟ್ಟುಕೊಂಡು ಬಡವರು, ಹಿಂದೂಳಿದ, ದಲಿತರ, ನೇಕಾರರು, ರೈತರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಒಂದಿಲ್ಲಾ ಒಂದು ಯೋಜನೆ ಕೊಟ್ಟಿದೆ. ನುಡಿದಂತೆ ನಡೆದ ಸರ್ಕಾರ ಅದು ಕಾಂಗ್ರೆಸ್ ಸರ್ಕಾರವಾಗಿದೆ. ಲೂಟಿ ಹೊಡೆದವರ ಕೈಗೆ ಅಧಿಕಾರ ಕೊಡಬಾರದು. ಬಿಜೆಪಿಯ ರಾಮುಲು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ನನಗೆ ಮತ ಹಾಕಿ ಆರಿಸಿ ಕಳಿಸಿದರೆ ರಾಜ್ಯದಲ್ಲಿಯೇ ಬಾದಾಮಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶನಿವಾರ ಬಾದಾಮಿ ಕ್ಷೇತ್ರದ ಗುಳೇದಗುಡ್ಡದಲ್ಲಿ ಗುರುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ನಂತರ ರೋಡ್ ಷೋ ನಡೆಸಿ ಮತ ಯಾಚಿಸಿದ ಅವರು ನಂತರ ಭಂಡಾರಿ ಕಾಲೇಜಿನ ಮೈದಾನದಲ್ಲಿ ಬೃಹತ್ ಪ್ರಮಾಣದಲ್ಲಿ ಸೇರಿದ ಮತದಾರ ರನ್ನುದ್ದೇಶಿಸಿ ಹಾಗೂ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಹಿಂದೆ ಚುನಾವಣೆ ಪ್ರಣಾಳಿಕೆಗಳಿಗೆ ರಾಜಕೀಯ ಪಕ್ಷಗಳು ಬೆಲೆ ಕೊಡುತ್ತಿರಲಿಲ್ಲ. ಆದರೆ. ಪ್ರಣಾಳಿಕೆಗಳಿಗೆ ಕಾಂಗ್ರೆಸ್ ಘನತೆ ನೀಡಿತು. ಈ ಕಾರಣಕ್ಕಾಗಿಯೇ 2013ರ ಚುನಾವಣೆಯ ಪ್ರಣಾಳಿಕೆಯಲ್ಲಿನ ಶೇ. 100ಕ್ಕೆ ನೂರಷ್ಟು ಭರವಸೆಗಳನ್ನು ಈಡೇರಿಸಿದ ಸರ್ಕಾರ ಯಾವುದಾದರು ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಇದರ ಜೊತೆಗೆ ಹತ್ತು ಹಲವು ಭಾಗ್ಯ ಯೋಜನೆ ಕೊಡುವುದರ ಜೊತೆಗೆ ರೈತರ, ನೇಕಾರರ ಸಾಲ ಮನ್ನಾ ಮಾಡಿದೆ. ಹಿಂದಿನ ಸರ್ಕಾರ ಯಾವುದು ಮಾಡದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕಾಂಗ್ರೆಸ್ ಮಾಡಿದೆ ಎಂದರು.

ADVERTISEMENT

ಶಾಸಕ ಸತೀಶ ಜಾರಕಿಹೊಳಿ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ, ಮಾಜಿ ಸಚಿವ ಎಚ್.ವೈ, ಮೇಟಿ, ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ರವೀಂದ್ರ ಕಲಬುರ್ಗಿ, ಡಾ. ದೇವರಾಜ ಪಾಟೀಲ, ಆಲಕೂಡ ಹನಮಂತಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರಕ್ಷೀತಾ ಇಟಿ, ಕಮಲಮ್ಮ ಯರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಜು ಜವಳಿ, ವೈ.ಆರ್. ಹೆಬ್ಬಳ್ಳಿ, ನಾಗಪ್ಪ ಗೌಡರ, ಹೊಳಬಸು ಶೆಟ್ಟರ, ಸಂಜಯ ಬರಗುಂಡಿ, ಭೀಮಸೇನ ಚಿಮ್ಮನಕಟ್ಟಿ, ಡಾ. ಬಸವರಾಜ ಕೋಲ್ಹಾರ, ಮಹೇಶ ಹೊಸಗೌಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.