ADVERTISEMENT

ಕ್ಷೇತ್ರ ಪ್ರಗತಿಗೆ ಪ್ರಾಮಾಣಿಕ ಪ್ರಯತ್ನ

ಅಭಿನಂದನಾ ಸಮಾರಂಭದಲ್ಲಿ ಶಾಸಕ ಸಿದ್ದು ಸವದಿ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 5:19 IST
Last Updated 16 ಜೂನ್ 2018, 5:19 IST
ಮಹಾಲಿಂಗಪುರ ಪಟ್ಟಣದ ವೈದ್ಯಕೀಯ ಸಂಘದ ವತಿಯಿಂದ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಲಾಯಿತು
ಮಹಾಲಿಂಗಪುರ ಪಟ್ಟಣದ ವೈದ್ಯಕೀಯ ಸಂಘದ ವತಿಯಿಂದ ಶಾಸಕ ಸಿದ್ದು ಸವದಿಯವರನ್ನು ಸನ್ಮಾನಿಸಲಾಯಿತು   

ಮಹಾಲಿಂಗಪುರ(ಬನಹಟ್ಟಿ): ‘ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಮೂಲಕ ಜನರ ಋಣ ತೀರಿಸುತ್ತೇನೆ’ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಮಹಾಲಿಂಗಪುರ ವೈದ್ಯಕೀಯ ಸಂಘ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ‘ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜೊತೆಗೆ ಮಹಾಲಿಂಗಪುರ ವಲಯದ ವೈದ್ಯರು ನಮಗೆ ಹೆಚ್ಚಿನ ಬೆಂಬಲ ನೀಡಿದ್ದರಿಂದ ಅಂದಾಜು 20 ಸಾವಿರಕ್ಕೂ ಅಧಿಕ ಮತದಿಂದ ಗೆಲ್ಲಲು ಸಾಧ್ಯವಾಯಿತು’ ಎಂದರು.

ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಬಿ.ಡಿ.ಬಾಳಿಗಿಡದ ಮಾತನಾಡಿ ‘ವೈದ್ಯರು ಹಾಗೂ ಸಿಬ್ಬಂದಿ ಮೇಲಿನ ಹಲ್ಲೆಗೆ ಪೊಲೀಸ್ ಇಲಾಖೆ ವತಿಯಿಂದ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

ADVERTISEMENT

ಡಾ.ಎ.ಆರ್.ಬೆಳಗಲಿ, ಸಂಶಿ ಮೇಡಮ್ ಮಾತನಾಡಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಡಾ.ವಿಜಯ ಹಂಚಿನಾಳ, ಡಾ.ವಸಂತ ಮಮದಾಪುರ, ಶ್ರೀಕಾಂತ ಅರಿಷಿನಗೋಡಿ, ಅಶೋಕ ದಿನ್ನಿಮನಿ, ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸನಗೌಡ ಗೋಲಪ್ಪನವರ, ವೈದ್ಯರಾದ ಬಿ.ಡಿ.ಸೋರಗಾಂವಿ, ವಿಶ್ವನಾಥ ಗುಂಡಾ, ಡಾ.ಎಂ.ಎಸ್.ಚನ್ನಾಳ,ಎಂ.ಎಂ.ಮೇದಾರ, ರಾಜೇಂದ್ರ ಪಾಟೀಲ, ಎಂ.ಐ.ಬೀಳಗಿ, ಡಾ. ರವಿ ಕಮತಗಿ, ಅಮೀತ ಅಂಬಿ, ಪವನ ಸೋರಗಾಂವಿ, ಸಂಜಯ ಮುರಗೋಡ, ಡಾ.ಮಾರಾಪುರ, ಪತ್ತಾರ, ಮುಖಂಡರಾದ ಈರಪ್ಪ ದಿನ್ನಿಮನಿ, ಜಿ.ಎಸ್.ಗೊಂಬಿ, ವಿಷ್ಣುಗೌಡ ಪಾಟೀಲ, ಶಂಕರಗೌಡ ಪಾಟೀಲ ಇದ್ದರು.

ಅಶೋಕ ದಿನ್ನಿಮನಿ ಸ್ವಾಗತಿಸಿದರು. ಚಂದ್ರಶೇಖರ ಮೋರೆ ನಿರೂಪಿಸಿದರು. ಶ್ರೀಕಾಂತ ಅರಿಷಿನಗೋಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.