ADVERTISEMENT

ಗಾರ್ಮೆಂಟ್ ಉದ್ಯಮದಲ್ಲಿ ಅಪಾರ ಅವಕಾಶ: ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:15 IST
Last Updated 11 ಏಪ್ರಿಲ್ 2012, 8:15 IST

ಇಳಕಲ್: ಉದ್ಯೋಗ ಸೃಷ್ಠಿಸುವ ಉದ್ದೇಶಕ್ಕಾಗಿ ಸರ್ಕಾರ ರಾಜ್ಯದಲ್ಲಿ 105 ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಇಲ್ಲಿ ತಿಂಗಳು ಅಧುನಿಕ ಹೊಲಿಗೆ ಯಂತ್ರಗಳಲ್ಲಿ ತಜ್ಞ ಸಿಬ್ಬಂದಿಯಿಂದ  ತರಬೇತಿ ಪಡೆದು, ಹೊಲಿಗೆ ಕೌಶಲ್ಯಗಳನ್ನು ಬೆಳೆಸಿಕೊಂಡು, ಸ್ವಂತ ಉದ್ಯೋಗ ಮಾಡ ಬಹುದು ಇಲ್ಲವೇ ಗಾರ್ಮೆಂಟ್ ಉದ್ಯಮದಲ್ಲಿ ನೌಕರಿಗೆ ಸೇರಿಕೊಳ್ಳಬಹುದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಅವರು ಮಂಗಳವಾರ ಕೈಮಗ್ಗ ಹಾಗೂ ಜವಳಿ ಇಲಾಖೆಯ ಸುವರ್ಣ ವಸ್ತ್ರಯೋಜನೆ ಯಡಿ ನಗರದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಎಸ್.ಜೆ.ಜಿ.ಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆರಂಭಿಸಲಾದ `ಸಿವ್ಹಿಂಗ್ ಮಶಿನ್ ಆಪರೇಟರ್~ ಕೌಶಲ್ಯ ಅಭಿವೃದ್ಧಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 

  ಸುವರ್ಣ ವಸ್ತ್ರ ನೀತಿ ಯೋಜನಾ ನಿರ್ದೇಶಕ ವಿಜಯಕುಮಾರ ನಿರಾಳೆ ಮಾತನಾಡಿ `ಬೆಂಗಳೂರು ಕೇಂದ್ರಿತವಾ ಗಿರುವ ಗಾರ್ಮೆಂಟ್ ಉದ್ಯಮವನ್ನು ರಾಜ್ಯದ ಇತರೆಡೆಗೂ ವಿಸ್ತರಿಸುವ ಉದ್ದೇಶದಿಂದ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು.

ಕೈಮಗ್ಗ ಹಾಗೂ ಜವಳಿ ಇಲಾಖೆ ಉಪ ನಿರ್ದೇಶಕ ದೊಡ್ಡಬಸವರಾಜ ಮಾತನಾಡಿ ` ಪ್ರತಿ ಕೌಶಲ್ಯ ಕೇಂದ್ರದಲ್ಲಿ 30 ಲಕ್ಷ ರೂಪಾಯಿಗಳ 40 ಅಧುನಿಕ ಹೊಲಿಗೆ ಯಂತ್ರಗಳಿವೆ. ಬಾಗಲಕೋಟ ಜಿಲ್ಲೆ ಒಟ್ಟು ನಾಲ್ಕು ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲೂ ತಿಂಗಳಿಗೆ 30 ರಂತೆ ವರ್ಷಕ್ಕೆ 360 ಜನರನ್ನು ಕೌಶಲ್ಯ ಪೂರ್ಣರನ್ನಾಗಿ ರೂಪಿಸಲಾಗುತ್ತಿದೆ ಎಂದರು. ಗಾರ್ಮೆಂಟ್ ಉದ್ದಿಮೆ ದಾರರು ಪ್ರತಿ ತಿಂಗಳು ಕೌಶಲ್ಯ ಕೇಂದ್ರಕ್ಕೆ ಬಂದು, ಉತ್ತಮ ಕೌಶಲ್ಯ ಹೊಂದಿದ ವರನ್ನು ಆಯ್ಕೆ ಮಾಡಿ ನೌಕರಿ ಕೊಡು ತ್ತಾರೆ ಎಂದರು.

ಜಿಲ್ಲೆಯಲ್ಲಿ ಗಾರ್ಮೆಂಟ್ ಉದ್ಯಮ ಸ್ಥಾಪಿಸುವ ವರಿಗೆ ಸರಕಾರ ಶೇ. 20 ಸಬ್ಸಿಡಿ ನೀಡುತ್ತದೆ. ವಿದ್ಯುಚ್ಛಕ್ತಿಯನ್ನು ಶೇ.1 ರ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಕೌಶಲ್ಯ ಅಭಿವೃದ್ಧಿ ಕೇಂದ್ರ ಗಳ  ಮಾನವ ಸಂಪನ್ಮೂಲ ಕೂಡಾ ಲಭ್ಯವಾಗಲಿದ್ದು, ಆಸಕ್ತರು ಗಾರ್ಮೆಂಟ್ ಉದ್ಯಮ ಸ್ಥಾಪಿಸಲು ಮುಂದೆ ಬರಬೇಕು ಎಂದರು.   ಸಾನ್ನಿಧ್ಯ ವಹಿಸಿದ್ಧ ಗುರು ಮಹಾಂತ ಸ್ವಾಮೀಜಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ವಿ.ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷೆ ವಿಜಯ ಬಂಡಿ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಬಿಜ್ಜಲ, ಐ.ಟಿ.ಐ ಕಾಲೇಜಿನ ಚೇರಮನ್ ಶಂಕ್ರಣ್ಣ ಮೇದಿಕೇರಿ, ಜಿ.ಪಂ ಸದಸ್ಯ ಈರಣ್ಣ ಬಂಡಿ, ಉಸ್ತುವಾರಿ ಅಧಿಕಾರಿ ಕೆ.ಎನ್.ಮಧುರಕರ ಉಪಸ್ಥಿತರಿದ್ದರು. ಮಂಜುನಾಥ ರಾಠಿ ಪ್ರಾರ್ಥನೆ ಹಾಡಿ ದರು. ಪ್ರಾಚಾರ್ಯ ಎಂ.ಬಿ.ಪರಪ್ಪ ಗೌಡ್ರ ಸ್ವಾಗತಿಸಿ ದರು.ಶ್ರೀನಿವಾಸ ಜೋಶಿ ನಿರೂಪಿಸಿದರು. ಶಂಕ್ರಣ್ಣ ಮೇದಿಕೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.