ADVERTISEMENT

ಗುರುವನ್ನು ಗೌರವಿಸಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:55 IST
Last Updated 11 ಫೆಬ್ರುವರಿ 2012, 5:55 IST

ಬಾಗಲಕೋಟೆ : ಗುರುಗಳನ್ನು ಆದರದಿಂದ ಕಾಣುವ ಮುಖಾಂತರ ಸಂಗೀತ ವಿದ್ಯೆಯನ್ನು ಕಲಿಯಲು ಸಾಧ್ಯ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಗುರುಸ್ವಾಮಿ ಗಣಾಚಾರಿ ಹೇಳಿದರು.

ನಗರದ ಎಕ್ಸ್‌ಟೆನ್‌ಶನ್ ಬಡಾವಣೆಯ ಕರ್ನಾಟಕ ಗ್ರಾಮೀಣ ವಿದ್ಯಾಪೀಠದ ಸ್ವಾಮಿ ಗಿರಿರಾಜ ಸ್ಕೂಲ್ ಆಫ್ ಮ್ಯೂಜಿಕ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಎಂಟನೇ ವಾರ್ಷಿಕೋತ್ಸವ, ಚಿಗುರು ಹಾಗೂ ಸಂಗೀತ ವರ್ಷಿಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲಿಸಿದ ಗುರುಗಳ ಮನವನ್ನು ಹಿಂಸಿಸುವದೇ ಮಹಾಪಾಪ ಎಂದು ಹೇಳಿದರು.  ನೇತ್ರ ತಜ್ಞ ಡಾ.ಲಿಂಗರಾಜ ಚಂದರಗಿ ಮಾತನಾಡಿದರು. ಗಿರಿಮಲ್ಲೇಶ ಮಹಾರಾಜ ಕನ್ನೂರ  ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಹೂಗಾರ, ಎಂ.ಬಿ.ಬೇತಾಳ, ವಿ.ಆರ್. ಹರಿಮಂದಿರ, ಚಿದಾನಂದ ಬಾಗಲಕೋಟೆ, ವೈ.ಸುದೀಂದ್ರ, ಕಿಶನ್ ಪಾಟೀಲ, ಯವನ್, ಚಿನ್ಮಯಿ ಪಾಟೀಲ, ಬಿ.ಯು.ತರುಣ, ಶ್ವೇತಾ ಬಾದಾಮಿ, ಬಾಗೇಶ್ವರಿ, ಶಂಕರ ಪಡಸಲಗಿ, ಮಾನಸಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಉಚಿತ ದಂತ ತಪಾಸಣೆ
ಬಾಗಲಕೋಟೆ      ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಇತ್ತೀಚಿಗೆ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಯಿತು.

ಗುಳೇದಗುಡ್ಡದ ಎಸ್.ಆರ್.ವಸ್ತ್ರದ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್.ಶಿಬಿರದ ಅಂಗವಾಗಿ ಏರ್ಪಡಿಸಿದ್ದ  ಈ ಶಿಬಿರದಲ್ಲಿ ಬಾಗಲಕೋಟೆಯ ಬಿ.ವಿ.ವ ಸಂಘದ ಪಿ.ಎಂ.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ಹಾಗೂ ಸಿಬ್ಬಂದಿ ವರ್ಗ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

  ದಂತ ಮಹಾವಿದ್ಯಾಲಯದ ತಜ್ಞ ವೈದ್ಯರಾದ ಡಾ.ಪರಪ್ಪ ಸಜ್ಜನ ಹಾಗೂ ಡಾ.ಅನಿತಾ ಆರ್.ಸಾಗರಕರ್ ನೇತೃತ್ವದಲ್ಲಿ ನಡೆದ ಈ ದಂತ ಶಿಬಿರದಲ್ಲಿ ಡಾ.ಕಿರಣ್, ಡಾ.ಹಾರ್ದಿಕ, ಡಾ.ರೂಸಲ್, ಡಾ.ಪ್ರಿಯದರ್ಶಿನಿ ಮತ್ತು ಎನ್.ಎಸ್.ಎಸ್.ಶಿಬಿರದ ಸಿಡಿಪಿಟಿ ಆಂತರಿಕ ಸಂಯೋಜಕ ಎನ್.ಆರ್.ಐರಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.