ADVERTISEMENT

ಜೀವನಕ್ಕಿಂತ ಮಾನವೀಯತೆ ದೊಡ್ಡದು

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 6:40 IST
Last Updated 6 ಜೂನ್ 2011, 6:40 IST

ಬಾದಾಮಿ:ಅಧ್ಯಾತ್ಮದಿಂದ ಮಾನವನಿಗೆ ಮಹಾದೇವನಾಗುವ ಅವಕಾಶವಿದೆ ಎಂದು ಶರಣ ಈಶ್ವರ ಮಂಟೂರ ನುಡಿದರು.

ಇಲ್ಲಿನ ವಿಶ್ವ ಚೇತನ ಸಂಘ, ಗಜಾನನ ಅಭಿವೃದ್ಧಿ ಸೇವಾ ಸಮಿತಿ ಹಾಗೂ ಆನಂದ ನಗರದ ಮಹಿಳಾ ಮಂಡಳದ ಸಹಯೋಗದೊಂದಿಗೆ ಆಯೋಜಿಸಿದ್ದ ಜೀವನ ದರ್ಶನ ಕುರಿತು ಅವರು ಉಪನ್ಯಾಸ ನೀಡಿದರು.

ಮಾನವ ಜನ್ಮ ದೊಡ್ಡದಲ್ಲ. ಆದರೆ ಮಾನವೀಯತೆ ದೊಡ್ಡದು. ಮನಸ್ಸಿನ ಶುದ್ಧೀಕರಣಕ್ಕೆ ಅಧ್ಯಾತ್ಮ ಅಗತ್ಯ. ಮಾನವೀಯತೆ ಬೆಳೆಸಿಕೊಳ್ಳುವುದ ರಿಂದ ವ್ಯಕ್ತಿಯ ಮೌಲ್ಯವೂ ಹೆಚ್ಚಾಗುವುದು ಎಂದು ಹೇಳಿದರು.

ಅನುಭಾವಿಗಳ ಜೀವನದ ಪರಿಚಯ ನಮ್ಮದಾಗಬೇಕು. ಇದರಿಂದ ನಮ್ಮ ಬದುಕಿನಲ್ಲಿ ಆನಂದ, ಸಮಾಧಾನ ಹಾಗೂ ಸದ್ಬುದ್ಧಿ ಇವುಗಳು ಪ್ರಾಪ್ತಿ ಯಾಗಲು ಸಾದ್ಯ ಎಂದು  ಹೇಳಿದರು. 

ಋತುಮಾನಗಳು ಬದಲಾದಂತೆ ನಾವೂ ಬದಲಾಗಬೇಕು. ಅದುವೇ ಆಧ್ಯಾತ್ಮ. ಪ್ರಕೃತಿ ರಹಸ್ಯಗಳ ಆಗರ. ಅದನ್ನು ವೀಕ್ಷಿಸುವ ಕಣ್ಣು ನಮ್ಮದಾಗ ಬೇಕು.  ಕಣ್ಣಿನೊಳ ಗೊಂದು ಕಣ್ಣಿದೆ ಆ ಕಣ್ಣಿನಿಂದ ನಾವು ಎಲ್ಲವನ್ನೂ ನೋಡಬೇಕು ಎಂದು  ಎಂದರು.

ಆನಂದನಗರದ ಗಣೇಶ ದೇವಾಲಯದ ಆವರಣದಲ್ಲಿ `ಬದುಕಿನ ಜೀವನ ದರ್ಶನ~ ಕುರಿತು ನೀಡಿದ ಆಧಾತ್ಮದ ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.