ADVERTISEMENT

ತೇರದಾಳ: ಗುಟ್ಕಾ ಸುಟ್ಟ ಪೊಲೀಸರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 9:15 IST
Last Updated 14 ಜೂನ್ 2013, 9:15 IST
ಬನಹಟ್ಟಿ ಸಮೀಪದ ತೇರದಾಳ ಪಟ್ಟಣದಲ್ಲಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಗುಟ್ಕಾ ಚೀಟಿಗಳನ್ನು ಸುಟ್ಟರು. ಪಟ್ಟಣದ ಪಿಎಸ್‌ಐ ಸುಂದರೇಶ ಹೊಳೆನ್ನವರ ಹಾಗೂ ಪೊಲೀಸ್ ಸಿಬ್ಬಂದಿ ಚಿತ್ರದಲ್ಲಿದ್ದಾರೆ.
ಬನಹಟ್ಟಿ ಸಮೀಪದ ತೇರದಾಳ ಪಟ್ಟಣದಲ್ಲಿ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಗುಟ್ಕಾ ಚೀಟಿಗಳನ್ನು ಸುಟ್ಟರು. ಪಟ್ಟಣದ ಪಿಎಸ್‌ಐ ಸುಂದರೇಶ ಹೊಳೆನ್ನವರ ಹಾಗೂ ಪೊಲೀಸ್ ಸಿಬ್ಬಂದಿ ಚಿತ್ರದಲ್ಲಿದ್ದಾರೆ.   

ಬನಹಟ್ಟಿ: ಬುಧವಾರ ಪಟ್ಟಣದಲ್ಲಿ ಸ್ಥಳೀಯ ಪಿಎಸ್‌ಐ ಸುಂದರೇಶ ಹೊಳೆನ್ನವರ ಅವರು ತಮ್ಮ ಸಿಬ್ಬಂದಿ ಜೊತೆಗೂಡಿ ಪಾನ್‌ಶಾಪ್ ಮತ್ತು ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದರು.

ಪಟ್ಟಣದ ಪೇಟೆ ಭಾಗ, ಬಸ್ ನಿಲ್ದಾಣ, ಮಹಾವೀರ ವೃತ್ತ ಸೇರಿದಂತೆ ಹಲವಾರು ಕಡೆ ದಾಳಿ ನಡೆಸಿದಾಗ ದೊರೆತ ಸಾವಿರಾರು ರೂಪಾಯಿ ಮೌಲ್ಯದ ಗುಟ್ಕಾ ಚೀಟುಗಳನ್ನು ಬಸ್ ನಿಲ್ದಾಣದ ಬಳಿ ಸುಟ್ಟು ಹಾಕಿದರು.

ನಗರದ ಯಾವುದೇ ವ್ಯಕ್ತಿ ಗುಟ್ಕಾ ಮಾರಾಟ ಮಾಡುವುದು ಕಂಡು ಬಂದರೆ ಅಂಥವರ ವಿರುದ್ಧ ಕಾನೂನು ಪ್ರಕಾರ ದಂಡ ವಿಧಿಸಲಾಗುವುದು ಎಂದು ಅಂಗಡಿಕಾರರಿಗೆ ಪಿಎಸ್‌ಐ ಸುಂದರೇಶ ಹೊಳೆನ್ನವರ ಎಚ್ಚರಿಕೆ ನೀಡಿದರು.

ಎಮ್.ಬಿ. ಪತ್ತಾರ, ಎಮ್.ಎಸ್. ತಾಳಿಕೋಟಿ, ರಾಜು ನಾಗನೂರ, ಬಸವರಾಜ, ಗುಲಬಾಳ, ಎಚ್.ಐ. ಮೆಂಡೆಗಾರ,  ಗೊಂದಿ,  ಹುಕುನ್ನವರ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.