ADVERTISEMENT

ದಿನಗೂಲಿ ಕಾರ್ಮಿಕರ ಕಾಯಂ ಶೀಘ್ರ: ಚರಂತಿಮಠ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:22 IST
Last Updated 5 ಡಿಸೆಂಬರ್ 2012, 8:22 IST

ಬಾಗಲಕೋಟೆ: ರಾಜ್ಯ ಸರ್ಕಾರ 23 ಸಾವಿರ ದಿನಗೂಲಿ ನೌಕರರನ್ನು ಶೀಘ್ರದಲ್ಲೇ ಕಾಯಂಗೊಳಿಸಲು ತೀರ್ಮಾನಿಸಿದೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ಬಾಗಲಕೋಟೆ ನಗರಸಭೆ ವತಿಯಿಂದ ನಗರಸಭೆ ಆವರಣದಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ನಿರ್ಮಿಸಿರುವ ಸಮುದಾಯ ಭವನ ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ದಿನಗೂಲಿ ಕಾರ್ಮಿಕರನ್ನು ಕಾಯಂ ಗೊಳಿಸುವ ಸಂಬಂಧ ಬೆಳಗಾವಿ ಅಧಿ ವೇಶನದಲ್ಲಿ ಸರ್ಕಾರ ಮಸೂದೆ ಮಂಡನೆ ಮಾಡಲಿದೆ,  ಈ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರಸಭೆಯಲ್ಲಿ ಹಲವು ವರ್ಷಗಳಿಂದ ದಿನಗೂಲಿಗಳಾಗಿ ಕಾರ್ಯನಿರ್ವಹಿಸುತ್ತಿರುವವರ ಪಟ್ಟಿ ತಯಾರಿಸುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ರೂ.30 ಕೋಟಿ ಅನುದಾನ: 2013-14ನೇ ಸಾಲಿಗೆ ಬಾಗಲಕೋಟೆ ನಗರಸಭೆಗೆ ಸಿ.ಎಂ.ಎಂ.ಟಿ.ಡಿ.ಪಿ. ಯೋಜನೆ ಕಾಮಗಾರಿಗೆ ರೂ.30 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು. ಈ ಹಣದಲ್ಲಿ ರೂ.24 ಕೋಟಿ ಯನ್ನು ರಸ್ತೆ ಅಭಿವೃದ್ಧಿಗೆ ಮತ್ತು ಉಳಿದ ರೂ.6 ಕೋಟಿಯನ್ನು ಚರಂಡಿ ನಿರ್ಮಾಣಕ್ಕೆ ಮಾತ್ರ ಬಳಸಿಕೊಳ್ಳಬೇಕಾ ಗುತ್ತದೆ ಎಂದರು.

ಸಿ.ಎಂ.ಎಂಟಿ.ಡಿ.ಪಿ. ಯೋಜನೆ ಅನ್ವಯ ನಗರಕ್ಕೆ ಈ ಹಿಂದಿನ ವರ್ಷ ದಲ್ಲಿ ರೂ.24.90 ಕೋಟಿ ಅನುದಾನ ನೀಡಲಾಗಿತ್ತು ಎಂದು ತಿಳಿಸಿದರು.

ಉದ್ಘಾಟನೆ: ನಗರಸಭೆ ಆವರಣ ದಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ (ರೂ.50 ಲಕ್ಷ) ನಿರ್ಮಾಣವಾದ ಸಮುದಾಯ ಭವನ ಮತ್ತು ರೂ.45.38 ಲಕ್ಷ ವೆಚ್ಚದಲ್ಲಿ ನಿರ್ಮಾಣ ವಾದ ಮೂರು ಸಿಬ್ಬಂದಿ ವಸತಿ ಗೃಹ ಗಳನ್ನು ಶಾಸಕರು ಉದ್ಘಾಟಿಸಿದರು.
2011-12ನೇ ಸಾಲಿನ ಶೇ.7.25 ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಯೋಜನೆಯಡಿ ರೂ.5 ಲಕ್ಷ ಮೊತ್ತದ ಅಡುಗೆ ಪಾತ್ರೆಗಳನ್ನು (ಬಾಂಡೆ ಸಾಮಾನು) ಹಿಂದುಳಿದ 9 ಸಮಾಜದ ಫಲಾನುಭವಿಗಳಿಗೆ  ವಿತರಿಸಿದರು.

2010-11ನೇ ಸಾಲಿನ ಶೇ.22. 75 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಯೋಜನೆಯಡಿ ರೂ. 10 ಲಕ್ಷ ಮೊತ್ತದಲ್ಲಿ 25 ಫಲಾ ನುಭವಿಗಳಿಗೆ ಕಂಪ್ಯೂಟರ್, ಪ್ರಿಂಟರ್ ಮತ್ತು ಯುಪಿಎಸ್ ನೀಡಲಾಯಿತು. ಘನತ್ಯಾಜ್ಯ ಸಂಗ್ರಹ ಸಂಬಂಧ ಪ್ರತಿ ಮನೆಗೆ ಎರಡೆರಡು ಪ್ಲಾಸ್ಟಿಕ್ ಡಬ್ಬಿ ವಿತರಿಸಲಾಯಿತು. ನಗರದಲ್ಲಿ ಕಸ ಆಯುವ ಜನರಿಗೆ ಇದೇ ಸಂದರ್ಭದಲ್ಲಿ ಗುರುತಿನ ಚೀಟಿ ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ನಾರಾ ಯಣಸಾ ಭಾಂಡಗೆ, ಉಪಾಧ್ಯಕ್ಷ ಶರಣಪ್ಪ ಗುಳೇದ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತಪ್ಪ ಪೂಜಾರಿ, ಪೌರಾ ಯುಕ್ತ ಬಿ.ಎ. ಶಿಂಧೆ, ರಾಜೂ ಬಳೂಲ ಮಠ, ಸದಾನಂದ ನಾರಾ, ಭಾಗ್ಯ ಹಂಡಿ, ಲಕ್ಷ್ಮಿ ಪೀರಶೆಟ್ಟಿ, ಮಲ್ಲಮ್ಮ ಜಾಲಗಾರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.