ADVERTISEMENT

ದೇಹದಾನ ಮಾಡಲು ಡಾ.ರಾಮಣ್ಣವರ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 8:09 IST
Last Updated 17 ಡಿಸೆಂಬರ್ 2012, 8:09 IST

ಇಳಕಲ್: ಮರಣಾನಂತರ ಶರೀರ ವನ್ನು  ಮಣ್ಣಿಗೆ ಸೇರಿಸಿಯೋ ಇಲ್ಲವೇ ಬೆಂಕಿಯಲ್ಲಿ ಸುಟ್ಟು ಹಾಕುವ ಬದಲು ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕಾಗಿ ವೈದ್ಯ ಕೀಯ ಕಾಲೇಜುಗಳಿಗೆ ದೇಹದಾನ ಮಾಡಿದರೇ ಸಾವಿನ ನಂತರವೂ ಇನ್ನೊ ಬ್ಬರಿಗೆ ಉಪಕಾರಿ ಆದಂತಾಗುತ್ತದೆ ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಬಿ.ಎಂ. ಕಂಕನಣವಾಡಿ ಆಯರ್ವೇದಿಕ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾಂತೇಶ ರಾಮಣ್ಣವರ ಹೇಳಿದರು.  

ಇಲ್ಲಿಯ ಅಮ್ಮೋ ಸೇವಾ ಸಂಸ್ಥೆಯಲ್ಲಿ ಆಯುಷ್ ಇಲಾಖೆ ಬಾಗಲಕೋಟೆ ಹಾಗೂ ದೇಶಿ ವೈದ್ಯರ ಕ್ಷೇಮಾಭಿವೃದ್ದಿ ಸಂಘ ಇಳಕಲ್ ಇವರ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಹಮ್ಮಿಕೊಳ್ಳಲಾದ ಉಚಿತ ಆಯುಷ್ ಚಿಕಿತ್ಸಾ ಶಿಬಿರ, ಮನೆ ಮದ್ದು ಕಾರ್ಯಾ ಗಾರ ಮತ್ತು ದೇಹ ದಾನ-ರಕ್ತದಾನ -ನೇತ್ರದಾನ ಜಾಗೃತಿ ಶಿಬಿರದಲ್ಲಿ ಮಾತನಾಡಿದರು.

ಸರಕಾರ ಆಯುರ್ವೇದ ಬೆಳವ ಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡು ತ್ತಿದೆ. ಅಲೋಪತಿ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. ದೇಶಿ ವೈದ್ಯರೇ  ಗ್ರಾಮೀಣ ಜನತೆ ವೈದ್ಯಕೀಯ ಜೀವನಾಡಿ ಯಾಗಿದ್ದಾರೆ ಎಂದರು.
ಹಳ್ಳಿಗಳಲ್ಲಿ ಸಂಚರಿಸಿ, ಮನೆ. ಮನೆಗೆ ಹೋಗಿ ಚಿಕಿತ್ಸೆ ನೀಡುವ ದೇಶಿವೈದ್ಯರ ಗ್ರಾಮೀಣ ಸೇವೆ ತುಂಬಾ ಅಮೂಲ್ಯವಾದದ್ದು ಎಂದರು.

  ಬಾಗಲಕೋಟೆ ಜಿಲ್ಲಾ ಆಯುಷ್ ಅಧಿಕಾರಿ ಸಂಗಮೇಶ ಕಲಹಾ ಹಾಗೂ ಬಸವರಾಜ ಮಠದ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಡಾ.ಮಹಾಂತ ಸ್ವಾಮೀಜಿ, ಗುರು ಮಹಾಂತ ಸ್ವಾಮೀಜಿ, ಡಾ.ಮಹಾಂತೇಶ ರಾಮಣ್ಣವರ ಹಾಗೂ   ಅವರ ತಾಯಿ ಅವರನ್ನು ದೇಶಿ ವೈದ್ಯರ ಕ್ಷೇಮಾ ಭಿವೃದ್ಧಿ ಸಂಘದಿಂದ ಸನ್ಮಾನಿಸ ಲಾಯಿತು.

ನಗರಸಭಾ ಉಪಾಧ್ಯಕ್ಷ ಹಾಸೀಮ್ ಬಾಗವಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಗುಂಡಪ್ಪ ಸಂಗಪ್ಪ, ಜಿಲ್ಲಾ ಆಯುಷ್ ವೈದ್ಯಾಧಿಕಾರಿಗಳ ಅಧ್ಯಕ್ಷ ಡಾ.ಬಿ.ಎಂ. ಉಪಾಧ್ಯ, ಅಮ್ಮ ಸೇವಾ ಸಂಸ್ಥೆ ಕಾರ್ಯಾಧ್ಯಕ್ಷ ಪುರುಷೋತ್ತಮ ದರಕ, ಬಿ.ಬಾಬು, ಶಾಂತು ಸರಗಣಾ ಚಾರಿ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.