ADVERTISEMENT

ಪ್ರಶಸ್ತಿಗೆ ಕೃತಿಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 9:05 IST
Last Updated 12 ಜೂನ್ 2012, 9:05 IST

ಬನಹಟ್ಟಿ: ಕರ್ನಾಟಕ ಬಾಲವಿಕಾಸ ಅಕಾಡೆಮಿಯು ಮಕ್ಕಳ ಸಾಹಿತ್ಯದ 5 ಪ್ರಕಾರಗಳಿಗೆ 2011-12ನೇ ಸಾಲಿಗಾಗಿ “ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ”ಗಳನ್ನು ನೀಡಲು ನಿರ್ಧರಿಸಿದೆ ಎಂದು ಜಿಲ್ಲಾ ಬಾಲವಿಕಾಸ ಅಕಾಡೆಮಿಯ ಸದಸ್ಯ ಜಯವಂತ ಕಾಡದೇವರ ತಿಳಿಸಿದ್ದಾರೆ.

ಜನವರಿ 2011ರಿಂದ ಡಿಸೆಂಬರ್ 2011 ರವರೆಗೆ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ,ಕಥಾ ಸಂಕಲನ, ನಾಟಕ (ಪಠ್ಯಾಧಾರಿತ ಬಿಟ್ಟು), ಕಾದಂಬರಿ ಹಾಗೂ ಬೇರೆ ಭಾಷೆಗಳಿಂದ ಅನುವಾದಗೊಂಡ ಯಾವುದೇ ಮಕ್ಕಳ ಸಾಹಿತ್ಯ ಕೃತಿಗಳನ್ನು 18 ವರ್ಷದ ಒಳಗಿನ ಹಾಗೂ ಮಕ್ಕಳಿಗಾಗಿ ದೊಡ್ಡವರು ಬರೆದು ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ.

ಯಾವುದೇ ಕ್ಷೇತ್ರದಲ್ಲಿನ ಕೃತಿಗಳನ್ನು ನೀಡಬಹುದಾಗಿದೆ. ಒಂದು ಕೃತಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುವುದು. ನಾಲ್ಕು ಪ್ರತಿಗಳನ್ನು ಆಕಾಡೆಮಿಗೆ ಸಲ್ಲಿಸಬೇಕು. ಪ್ರಶಸ್ತಿಗಾಗಿ ಆಯ್ಕೆ ಯಾದ ಕೃತಿಗಳಿಗೆ 5000 ನಗದು  ಬಹುಮಾನ ನೀಡಿ ಲೇಖಕರನ್ನು ಗೌರವಿಸಲಾ ಗುವುದು. ಕೃತಿಗಳನ್ನು ಕಳಿಸುವ ಕೊನೆಯ ದಿನಾಂಕ ಜೂನ್ 23. ಈಗಾಗಲೇ ಅಕಾಡೆಮಿಯಿಂದ ಪ್ರಶಸ್ತಿಯನ್ನು ಪಡೆದಿದ್ದರೆ ಅವರು ಸೌಲಭ್ಯಕ್ಕೆ ಅರ್ಹರಿರುವುದಿಲ್ಲ.

ADVERTISEMENT

ಕೃತಿಗಳನ್ನು  ಯೋಜನಾಧಿಕಾರಿ ಗಳು, ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿ, ಪೊಲೀಸ್ ಹೆಡ್ ಕ್ವಾರ್ಟಸ್ ಎದುರು, ಮಹಾಂತೇಶ ನಗರ ಧಾರವಾಡ -8 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.