ADVERTISEMENT

ಬಾದಾಮಿ: ಕುಸಿದ ಕಲ್ಲುಗಳು ದುರಸ್ತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 11:37 IST
Last Updated 30 ಜೂನ್ 2021, 11:37 IST
ಬಾದಾಮಿಯಿಂದ ಉತ್ತರ ದಿಕ್ಕಿನ ಬೆಟ್ಟಕ್ಕೆ ಕನ್ನಡ ತ್ರಿಪದಿ ಕಪ್ಪೆ ಅರಭಟ್ಟನ ಶಾಸನವನ್ನು ವೀಕ್ಷಿಸಲು ಹೋಗುವ ರಸ್ತೆಯ ಕಾಂಪೌಂಡ್ ಕಲ್ಲುಗಳು ಕುಸಿದಿರುವುದು
ಬಾದಾಮಿಯಿಂದ ಉತ್ತರ ದಿಕ್ಕಿನ ಬೆಟ್ಟಕ್ಕೆ ಕನ್ನಡ ತ್ರಿಪದಿ ಕಪ್ಪೆ ಅರಭಟ್ಟನ ಶಾಸನವನ್ನು ವೀಕ್ಷಿಸಲು ಹೋಗುವ ರಸ್ತೆಯ ಕಾಂಪೌಂಡ್ ಕಲ್ಲುಗಳು ಕುಸಿದಿರುವುದು   

ಬಾದಾಮಿ: ತಟಕೋಟೆ ಸಮೀಪದ ಉತ್ತರ ಬೆಟ್ಟದಲ್ಲಿರುವ ಕನ್ನಡ ತ್ರಿಪದಿ ಕಪ್ಪೆ ಅರಭಟ್ಟನ ಶಾಸನದ ರಸ್ತೆಯ ಕಾಂಪೌಂಡ್ ಕಲ್ಲುಗಳು ಕುಸಿದಿವೆ. ಶೀಘ್ರವಾಗಿ ಇವುಗಳ ದುರಸ್ತಿ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರವಾಸಿಗರು, ಇತಿಹಾಸ ವಿದ್ವಾಂಸರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕನ್ನಡದ ಮೊಟ್ಟಮೊದಲ ತ್ರಿಪದಿ ಶಾಸನವನ್ನು ವೀಕ್ಷಿಸಲು ಹೋಗುವರು. ರಸ್ತೆಯನ್ನು ಬೇಗ ದುರಸ್ತಿ ಮಾಡಿಸಲು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಒತ್ತಾಯಿಸಿದ್ದಾರೆ.

ರಸ್ತೆ ದುರಸ್ತಿ ಕುರಿತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಮೌನೇಶ ಕುರುವತ್ತಿ ಅವರನ್ನು ಸಂಪರ್ಕಿಸಿದಾಗ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಮಂಜೂರಾಗಿ ಬಂದ ಕೂಡಲೇ ದುರಸ್ತಿ ಕೈಗೊಳ್ಳುವುದಾಗಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.