ADVERTISEMENT

ಮಹಿಳೆಗೂ ಪ್ರಾಶಸ್ತ್ಯ ನೀಡಿ: ಸಚಿವೆ ಉಮಾಶ್ರೀ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 5:59 IST
Last Updated 27 ನವೆಂಬರ್ 2017, 5:59 IST

ರಬಕವಿ ಬನಹಟ್ಟಿ: ‘ಸರ್ಕಾರದ ಯೋಜನೆಗಳನ್ನು ನೀಡುವ ಸಂದರ್ಭದಲ್ಲಿ ಮಹಿಳೆಯರಿಗೂ ಕೂಡಾ ಪ್ರಾಶಸ್ತ್ಯನೀಡಬೇಕು. ವಿಧವೆ, ನಿರ್ಗತಿಕ ಮತ್ತು ಬಡತನ ರೇಖೆಗಿಂತ ಕಡಿಮೆ ಇರುವ ಹೆಣ್ಣು ಮಕ್ಕಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.

ಇಲ್ಲಿನ ನಗರಸಭೆಯ ಸಭಾಭವನದಲ್ಲಿ ಶನಿವಾರ ವಾಜಪೇಯಿ ವಸತಿ ಯೋಜನೆಯ ಕಾಮಗಾರಿಯ ಆದೇಶದ ಪ್ರತಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರಸಭೆಯ ವ್ಯಾಪ್ತಿಯಲ್ಲಿ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಒಟ್ಟು ಮೂರೂವರೆ ಸಾವಿರಕ್ಕೂ ಹೆಚ್ಚು ಮನೆಗಳನ್ನು ನೀಡಲಾಗಿದೆ. ಇನ್ನಷ್ಟು ಮನೆಗಳನ್ನು ನೀಡಲಾಗುವುದು. ಸೂರಿಲ್ಲದವರಿಗೆ ಸೂರು ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲುಗಳಿಗೆ ತಲುಪಿಸಲಾತ್ತಿದೆ. ‘ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರೀತಿ–ನೀತಿ, ಕಾನೂನು ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾಗದವರು ನಿರಾಶೆಗೊಳ್ಳದೆ ಮತ್ತೊಮ್ಮೆ ಪ್ರಯತ್ನಿಸಬೇಕು. ಮಧ್ಯವರ್ತಿಗಳಿಗೆ ಹಣ ನೀಡಬಾರದು’ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ ಸೋರಗಾವಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ರಮೀಜಾ ಝಾರೆ ಉಪಸ್ಥಿತರಿದರು. ಕಾರ್ಯಕ್ರಮದಲ್ಲಿ ಸಂಗಪ್ಪ ಕುಂದಗೋಳ, ಶಾಂತಾ ಮಂಡಿ, ಆಶಾ ಭೂತಿ, ಚಿದಾನಂದ ಮಟ್ಟಿಕಲ್ಲಿ, ಚಿದಾನಂದ ಗಾಳಿ, ಕುಮಾರ ಬಿಳ್ಳೂರ, ವಾಸು ಕೋಪರ್ಡೆ, ಗುರುನಾಥ ಬಕರೆ, ಎಸ್‌.ಎಸ್.ಹೆರಲಗಿ, ಎಸ್‌.ಸಿ. ಪೋತರಾಜ, ಮುಖೇಶ ಬನಹಟ್ಟಿ ಇದ್ದರು. ವಿದ್ಯಾಧರ ಕಲಾದಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.