ADVERTISEMENT

‘ಯುವಕರಿಗೆ ಆದ್ಯತೆ ನೀಡದಿದ್ದರೆ ಬಂಡಾಯ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 5:13 IST
Last Updated 4 ಅಕ್ಟೋಬರ್ 2017, 5:13 IST

ಸಾವಳಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಜನಪರ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ 2018ರ ಚುನಾವಣೆಯಲ್ಲಿ ಜಮಖಂಡಿ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಿ ಯುವಕರಿಗೆ ನೀಡದೆ ಹೋದರೆ ಸೋಲುವುದು ಖಚಿತ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜು ಮೇಲಿನಕೇರಿ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 34,000 ದಲಿತರು, 27,000 ಮುಸ್ಲಿಮರು ಕ್ಷೇತ್ರದ ನಂಬರ್ 1 ಮತ್ತು 2ನೇ ಸ್ಥಾನದಲ್ಲಿದ್ದಾರೆ. ಇವರು ಹಾಗೂ ಇತರರು ಕೂಡಿ ತೃತೀಯ ರಂಗ ರಚಿಸುವ ಮೊದಲು ರಾಜ್ಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಯನ್ನು ಬದಲಾಯಿಸಿ ಯುವ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

‘ಇದ್ದ ಮಕ್ಕಳಿಗೆ ಕೂಳಿಲ್ಲ, ಮತ್ತೊಂದು ಕೊಡು ಶಿವರಾಯ ಎಂಬಂತೆ ತಮ್ಮ, ತಮ್ಮ ಕ್ಷೇತ್ರಗಳನ್ನು ದಂಡಿಗೆ ಇಟ್ಟು ಅವರು ತೇರದಾಳಕ್ಕೆ ನಿಲ್ತಾರೆ, ಇವರು ಜಮಖಂಡಿಗೆ ಬರುತ್ತಾರೆ. ಈ ತರಹದ ಮಾತುಗಳು ಕೇಳಿ, ಕೇಳಿ ಸಾಕಾಗಿದೆ. ಅಷ್ಟಕ್ಕೂ ಉತ್ತರ ಕರ್ನಾಟಕವೆಂದರೇ ಏನೆಂದು ತಿಳಿಯದಾಗಿದೆ ಎಂದರು.

ADVERTISEMENT

‘ರಾಜ್ಯ ಕಾಂಗ್ರೆಸ್‌ ನಾಯಕರು ಜಮಖಂಡಿ ಮತಕ್ಷೇತ್ರಕ್ಕೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಜನರ ಅಭಿವೃದ್ಧಿ ಬಯಸುವ ಯುವ ನಾಯಕನಿಗೆ ಟಿಕೆಟ್‌ ನೀಡದಿದ್ದರೆ. ಅದರ ಬದಲಾಗಿ ನಾನೇ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಕೆ’ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.