ADVERTISEMENT

ಲಕ್ಕವ್ವ ಜಾತ್ರೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 8:55 IST
Last Updated 11 ಜೂನ್ 2013, 8:55 IST
ಆಸಂಗಿ ಜಾತ್ರೆ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಮರಗಾಲು ಕಟ್ಟಿಕೊಂಡ ವ್ಯಕ್ತಿ ಗಮನ ಸೆಳೆದ ಬಗೆ.
ಆಸಂಗಿ ಜಾತ್ರೆ ನಿಮಿತ್ತ ನಡೆದ ಮೆರವಣಿಗೆಯಲ್ಲಿ ಮರಗಾಲು ಕಟ್ಟಿಕೊಂಡ ವ್ಯಕ್ತಿ ಗಮನ ಸೆಳೆದ ಬಗೆ.   

ಬನಹಟ್ಟಿ: ಇಲ್ಲಿಗೆ ಸಮೀಪದ ಅಸಂಗಿ ಗ್ರಾಮದಲ್ಲಿ ಲಕ್ಕವ್ವ ದೇವಿಗೆ ಉಡಿ ತುಂಬುವ ಮತ್ತು ಹನುಮಾನ ದೇವರ ಓಕುಳಿ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಜಾತ್ರೆಯ ನಿಮಿತ್ತ ಗ್ರಾಮದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಸಂಜೆ ನಡೆದ ಮೆರಣಿಗೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ನಲ್ಲಿ  ಭಿತ್ತಿ ಚಿತ್ರಗಳು ಪ್ರದರ್ಶನಗೊಂಡವು.  ಅದೇ ರೀತಿಯಾಗಿ ವಿವಿಧ ವೇಷಧಾರಿಗಳು, ಎತ್ತಿನ ಬಂಡಿಯ ಮೇಲೆ ಬೃಹದಾಕಾರದ ಆನೆಯನ್ನು ನಿರ್ಮಿಸಲಾಗಿತ್ತು.
 

ಕರಡಿ ಮಜಲು, ಲಮಾಣಿ ನೃತ್ಯ, ಗರಡಿ ಮನೆ ದೃಶ್ಯ, ಕುದುರೆ ಮತ್ತು ನವಿಲು ಸೋಗುದಾರರು ಕಾಲುಗಳಿಗೆ ಮರಗಳನ್ನು ಕಟ್ಟಿಕೊಂಡು ನೃತ್ಯವನ್ನು ಮಾಡಿದರು.

ವೈಭವದ ಈ  ಮೆರವಣಿಗೆಯನ್ನು  ಗ್ರಾಮದ ಎಲ್ಲರೂ ರಸ್ತೆಯ ಪಕ್ಕದಲ್ಲಿ ನಿಂತು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT