ADVERTISEMENT

ಶ್ರೀಕಾಂತ ಬಸವಣ್ಣೆಪ್ಪಾ ಅಡಿಮನಿ ದೇಹದಾನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 6:37 IST
Last Updated 14 ಜೂನ್ 2013, 6:37 IST

ಹುಬ್ಬಳ್ಳಿ: ಬೈಲಹೊಂಗಲದಲ್ಲಿ ಇತ್ತೀಚಿಗೆ ನಿಧನರಾದ  ಶ್ರೀಕಾಂತ ಬಸವಣ್ಣೆಪ್ಪಾ ಅಡಿಮನಿ ಅವರ ಇಚ್ಛೆಯನುಸಾರವಾಗಿ ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುರುವಾರ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನಕ್ಕಾಗಿ ದೇಹವನ್ನು ದಾನ ಮಾಡಿದ್ದಾರೆ.

ಬೈಲಹೊಂಗಲದ  ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಡಾ.ಮಹಾಂತೇಶ  ರಾಮಣ್ಣವರ  ನೇತೃತ್ವದಲ್ಲಿ  ಈ ಕಾರ್ಯಕ್ರಮ ನಡೆಯಿತು.

ಟ್ರಸ್ಟ್‌ನ ಅಧ್ಯಕ್ಷೆ ಡಾ. ಸುಶೀಲಾದೇವಿ ರಾಮಣ್ಣವರ, ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಬಿ. ಬಿ. ಹುನಗುಂದ ಮತ್ತು ಕಾಲೇಜಿನ ಪ್ರಾಚಾರ್ಯ ಡಾ. ಪಿ. ಜಿ. ಸುಬ್ಬನಗೌಡ್ರ ಹಾಗೂ ಟ್ರಸ್ಟಿನ ಕಾರ್ಯಾಧ್ಯಕ್ಷ  ಡಾ.ಮಹಾಂತೇಶ ರಾಮಣ್ಣವರ  ಅಡಿಮನಿ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೇಹದಾನ ಮಾಡಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ 9242496497 ಸಂಪರ್ಕಿಸಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.