ADVERTISEMENT

ಸಂಘಟನೆಯಿಂದ ಸಮಾಜ ಅಭಿವೃದ್ಧಿ: ಮೀರಾ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 9:36 IST
Last Updated 19 ಡಿಸೆಂಬರ್ 2012, 9:36 IST

ಗುಳೇದಗುಡ್ಡ: ಸಮಾಜ ಅಭಿವೃದ್ಧಿಗೆ ಸಂಘಟನೆ ಅಗತ್ಯ.  ಪ್ರತಿಯೊಬ್ಬರು ನಂಬಿಕೊಂಡಿರುವ ಉದ್ಯೋಗದಲ್ಲಿ ಶ್ರದ್ಧೆ ಭಕ್ತಿ ಪರಿಶ್ರಮ ಹಾಗೂ ಆತ್ಮ ವಿಶ್ವಾಸದಿಂದ ನಡೆದುಕೊಂಡರೆ  ಮಾತ್ರ ವ್ಯಕ್ತಿ ಮತ್ತು ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗುಲ್ಬರ್ಗದ ಉದ್ಯೋಗ ರತ್ನ ಪ್ರಶಸ್ತಿ ವಿಜೇತ ಮಹಿಳೆ ಮೀರಾ ರಾಘೋಜಿ ಹೇಳಿದರು.

ಇಲ್ಲಿಯ ಆರ್ಯ ವೈಶ್ಯ ಸೇವಾ ಸಮಿತಿ, ವಾಸವಿ ಮಹಿಳಾ ಮಂಡಳ ಹಾಗೂ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ನಡೆದ ಸನ್ಮಾನ ಸಮಾ ರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಗುಲ್ಬರ್ಗದ ರಾಮಚಂದ್ರ ರಾಘೋಜಿ, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಶಶಿರೇಖಾ ಬೊನಗೇರಿ, ಕಟಗೇರಿ ಸಮಾಜದ ಹಿರಿಯ ಟಿ.ಕೆ. ಬೊನಗೇರಿ, ರಾಜ್ಯ ಸಮಿತಿ ಸದಸ್ಯ ಸತ್ಯನಾರಾಯಣ ಹೇಮಾದ್ರಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸಮಾಜದ ಹಿರಿಯ ಕೃಷ್ಟಪ್ಪ ಧಾರ ವಾಡ, ರಾಧಾಬಾಯಿ ಧಾರವಾಡ ದಂಪತಿ, ದನಂಜಯ ಕಂದ ಕೂರ, ಕೆರೂರ ಶ್ರೀನಿವಾಸ ಕಂದಕೂರ, ಬದಾಮಿ ಮಂಜುನಾಥ ಪತೇಪೂರ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷ ರಾಮಣ್ಣ ಬಿಜಾ ಪೂರ ಅಧ್ಯಕ್ಷತೆ ವಹಿಸಿದ್ದರು.ತಿಮ್ಮಯ್ಯ ಬೊನಗೇರಿ, ಹನ ಮಂತಪ್ಪ ಅಗಡಿ, ವಿಶ್ವನಾಥ ಪಾನ ಘಂಟಿ, ಹನಮಂತ ಬೊನಗೇರಿ, ವೆಂಕಟೇಶ ಬಿಜಾಪೂರ, ಕಾಶೀನಾಥ ಹಂದ್ರಾಳ, ಹನಮೇಶ ತಾವರಗೇರಿ  ಉಪಸ್ಥಿತರಿದ್ದರು. ಶ್ರೀಕಾಂತ ಧಾರ ವಾಡ ಪಾಸ್ತಾವಿಕವಾಗಿ ಮಾತ ನಾಡಿದರು. ನಾಗರಾಜ ಧಾರವಾಡ ಸ್ವಾಗತಿಸಿದರು. ಮಹೇಶ ಬಿಜಾಪೂರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.