ADVERTISEMENT

ಹಳಕಟ್ಟಿ ವಚನ ಸಂಗ್ರಹ ಒರೆಗೆ ಹಚ್ಚಲು ವಿರೋಧ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2017, 5:30 IST
Last Updated 8 ಅಕ್ಟೋಬರ್ 2017, 5:30 IST
ಮಾತೆ ಮಹಾದೇವಿ
ಮಾತೆ ಮಹಾದೇವಿ   

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ವಚನ ಪಿತಾಮಹ ಫ.ಗು. ಹಳಕಟ್ಟಿ ಸಂಗ್ರಹಿಸಿರುವ ವಚನಗಳನ್ನು ಒರೆಗೆ ಹಚ್ಚುವ ಅವಶ್ಯಕತೆ ಇದೆ’ ಎಂದು ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಹೊರಹೊಮ್ಮಿದ ಅಭಿಪ್ರಾಯಕ್ಕೆ ಲಿಂಗಾಯತ ಧರ್ಮ ಮಹಾಸಭೆಯ ಸಂಸ್ಥಾಪಕ ಗೌರವಾಧ್ಯಕ್ಷೆ ಮಾತೆ ಮಹಾದೇವಿ ಹಾಗೂ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕೂಡಲಸಂಗಮದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾತೆ ಮಹಾದೇವಿ, ‘ಬಹಿರಂಗ ಸಭೆಯಲ್ಲಿ ಒಂದು, ಗೋಪ್ಯ ಸಭೆಗಳಲ್ಲಿ ಮತ್ತೊಂದು ನಿಲುವು ವ್ಯಕ್ತಪಡಿಸುತ್ತಿರುವ ಮಹಾಸಭೆಯನ್ನು ಬಸವತತ್ವ ನಿಷ್ಠರು ಬಹಿಷ್ಕರಿಸಿ, ಮಹಾಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಲಹೆ ನೀಡಿದ್ದಾರೆ. ‘ಹಳಕಟ್ಟಿ ಅವರು ವಚನಗಳನ್ನು ಸಂಗ್ರಹಿಸಲು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೂ ಅವರ ಶ್ರಮವನ್ನು ಅಗೌರವದಿಂದ ಕಾಣುವುದು ಸರಿಯಲ್ಲ ಎಂದರು.

ಶರಣರಿಗೆ ಅವಮಾನ: ಹಳಕಟ್ಟಿಯವರ ಸಂಶೋಧನೆಯನ್ನು ಸುಳ್ಳು ಎಂದು ಸೃಷ್ಟಿಸಲು ಅವರು ಸಂಪಾದಿಸಿದ ವಚನಗಳನ್ನು ತಿರುಚುವ ಕೃತ್ಯಕ್ಕೆ ವೀರಶೈವ ಮಹಾಸಭೆ ಕೈಹಾಕಿದೆ ಎಂದು ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಟೀಕಿಸಿದ್ದಾರೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.