ADVERTISEMENT

ಹೋಬಳಿಗಳಲ್ಲಿ ಅಟಲ್‌ಜಿ ಜನಸ್ನೇಹಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:00 IST
Last Updated 18 ಡಿಸೆಂಬರ್ 2012, 11:00 IST

ಮುಧೋಳ: ಜನಸಾಮಾನ್ಯರಿಗೆ ಸರ್ಕಾ ರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮತ್ತು ಅಗತ್ಯ ಪ್ರಮಾಣ ಪತ್ರಗಳು ಒಂದೇ ದಿನದಲ್ಲಿ ಸಿಗುವಂತೆ ಮಾಡುವ ಸಲುವಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನವಾದ ಡಿಸೆಂಬರ್ 25 ರಂದು ರಾಜ್ಯದ 900 ಹೋಬಳಿಗಳಲ್ಲಿ ಅಟಲಜಿ ಜನಸ್ನೇಹಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಸೋಮವಾರ ತಾಲ್ಲೂಕಿನ ಲೋಕಾ ಪುರದಲ್ಲಿ 11 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಇಡೀ ಕ್ಷೇತ್ರ ನೀರಾವರಿ ವ್ಯಾಪ್ತಿಗೊಳ ಪಟ್ಟು, ಕುಡಿಯುವ ನೀರು, ಕೆರೆ ಬಾಂದಾರ ಕಾಮಗಾರಿ ಹಾಗೂ ಅತಿ ಹೆಚ್ಚಿನ ವಿದ್ಯುತ್ ಸರಬರಾಜು ಸ್ಟೇಶನ್ ಹೊಂದಿರುವ ಮುಧೋಳ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾಮಗಾರಿಗಳನ್ನು ಉಪ ಮುಖ್ಯಮಂತ್ರಿ ಈಶ್ವರಪ್ಪ ಶ್ಲಾಘಿಸಿ ದರಲ್ಲದೇ ಮುಧೋಳ ಕ್ಷೇತ್ರ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಗ್ರಾಮೀಣ ಕುಡಿಯುವ ನೀರಿಗೆ ಹಾಗೂ ರೈತರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, 1800 ಕೋಟಿ ರೂ.ಗಳನ್ನು ಕುಡಿಯುವ ನೀರಿಗೆ ಮೀಸಲಿಟ್ಟಿದೆ ಎಂದರು.ಕರ್ನಾಟಕವು ಅಭಿವೃದ್ಧಿಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಯೆಂದು ಕೇಂದ್ರ ಯೋಜನಾ ಖಾತೆ ತಿಳಿಸಿದೆ.

ರಾಜ್ಯದ ಸರ್ಕಾರಿ ಭೂಮಿ ಗಳಲ್ಲಿ ವಾಸಿಸುತ್ತಿರುವವರ ಭೂಮಿ ಯನ್ನು ಸಕ್ರಮಗೊಳಿಸುವ ಕಾನೂನನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸ ಲಾಯಿತು. ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಹ ಜಾರಿಗೊಳಿಸ ಲಾಯಿತು ಎಂದು ಅವರು ತಿಳಿಸಿದರು.

ಸಣ್ಣ ನೀರಾವರಿ ಹಾಗೂ ಉಸ್ತು ವಾರಿ ಸಚಿವರಾದ ಗೋವಿಂದ ಕಾರ ಜೋಳ ಮಾತನಾಡಿ ಈ ಭಾಗದಲ್ಲಿ ಕ್ಲೋರೈಡ್‌ಯುಕ್ತ ಹಾಗೂ ಸುಣ್ಣದ ಕಲ್ಲಿನ ಅಂಶವಿರುವ ನೀರಿನಿಂದ ಮುಕ್ತಿ ಪಡೆಯಲು ಘಟಪ್ರಭಾ ನದಿಯಿಂದ 20 ಕೋಟಿ ವೆಚ್ಚದಲ್ಲಿ ಈ ಕುಡಿಯುವ ನೀರಿನ ಸರಬರಾಜು ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದರು.

ಮುಧೋಳ ತಾಲ್ಲೂಕಿನ 48 ಹಳ್ಳಿಗಳಿಗೆ ರೂ. 70 ಕೋಟಿ ವೆಚ್ಚದಲ್ಲಿ ನದಿ ನೀರು ಪೂರೈಕೆ ಮಾಡುವ ಕಾಮಗಾರಿಗಳು ಚಾಲ್ತಿಯಲ್ಲಿವೆ. ರಾಜ್ಯ ಸರ್ಕಾರವು ಕುಡಿಯುವ ನೀರಿಗೆ ಆದ್ಯತೆ ನೀಡಿದ್ದು, 21008 ಹಳ್ಳಿಗಳ ಪೈಕಿ 8 ಸಾವಿರಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದರು. ಸರಕಾರವು ರೈತರ ಅಭಿ ವೃದ್ಧಿಗೆ, ರಸ್ತೆ, ಮೂಲ ಸೌಕರ್ಯ, ಶಿಕ್ಷಣ ಆರೋಗ್ಯ ಹಾಗೂ ನೈರ್ಮ ಲ್ಯಕ್ಕೂ ಆದ್ಯತೆ ನೀಡಿದೆ ಎಂದು ಹೇಳಿದರು.

ಲೋಕಾಪುರ ಹಿರೇಮಠದ ಚಂದ್ರಶೇಖರ ದೇವರು, ಜ್ಞಾನೇಶ್ವರ ಮಠದ ಬೃಹ್ಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ ಅಧ್ಯಕ್ಷೆ ಶಾಂತವ್ವ ಭೂಷಣ್ಣವರ, ವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಭಾಂಡಗೆ, ರನ್ನ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬಿಜೆಪಿ ಮುಖಂಡ ರಾಮಣ್ಣ ತಳೇವಾಡ, ಜಿ.ಪಂ. ಸದಸ್ಯ ಮಹಾಂತೇಶ ಹಿಟ್ಟಿನಮಠ, ಕಾಶವ್ವ ಹೊಸಟ್ಟಿ, ರಮೇಶ ಪಂಚಗಟ್ಟಿಮಠ,  ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿ.ಪಂ ಸಿ.ಇ.ಒ ಎಸ್.ಜಿ. ಪಾಟೀಲ ಉಪಸ್ಥಿತರಿದ್ದರು.ಕಾಶೀನಾಥ ಹುಡೇದ ಸ್ವಾಗತಿಸಿದರು. ಮಂಜುಳಾ ಹಾಗೂ ಕೃಷ್ಣಗೌಡರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT