ADVERTISEMENT

‘ಚನ್ನಮ್ಮನ ವಿಜಯೋತ್ಸವ: ಪಂಚಮಸಾಲಿಗರ ನಿತ್ಯೋತ್ಸವ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:18 IST
Last Updated 18 ಡಿಸೆಂಬರ್ 2013, 5:18 IST

ಮಹಾಲಿಂಗಪುರ: ಸಮಾಜದ ವಿವಿಧ ಸಮುದಾಯದವರು ತಮ್ಮ ತಮ್ಮ ಸಮಾಜದ ದಾರ್ಶನಿಕರ ಹೆಸರಿನ ಮೂಲಕ ಸಂಘಟಿತರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿ ಕೊಂಡರೆ ತಪ್ಪಿಲ್ಲ. ಸ್ವಾಭಿಮಾನ, ಭಾಷಾಭಿಮಾನ ಹಾಗೂ ದೇಶಾಭಿಮಾನದ ಸಂಕೇತವಾಗಿರುವ ವೀರರಾಣಿ ಕಿತ್ತೂರು ಚನ್ನಮ್ಮನ ವಿಜಯೋತ್ಸವವು ಪಂಚಮಸಾಲಿ ಸಮಾಜ ಬಾಂಧವರಿಗೆ ನಿತ್ಯೋತ್ಸವವಾದಾಗ ಸಮಾಜ ಕ್ರಿಯಾಶೀಲವಾಗಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯ ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ಪಟ್ಟಣದ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ನಿರ್ಮಿಸಲಾದ ಲಿಂ. ಬಸವರಾಜ ವಜ್ಜರಮಟ್ಟಿ ವೇದಿಕೆಯಲ್ಲಿ ನಡೆದ ಕಿತ್ತೂರು ಚನ್ನಮ್ಮನ 190ನೇ ವಿಜಯೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ಸಂಘಟನೆಗಳು ನಿಂತ ನೀರಾಗದೇ ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರು ಸಮಾಜವನ್ನು ಮುನ್ನಡೆಸುವ ಕಾರ್ಯದಲ್ಲಿ ತೊಡಗಿದಾಗ ಸಮಾಜದ ಏಳ್ಗೆ ಸಾಧ್ಯ. ಮಹಾಲಿಂಗಪುರ, ಜಮಖಂಡಿ ಹಾಗೂ ಗದಗ ಪಂಚಮಸಾಲಿ ಸಮಾಜಕ್ಕೆ ತಲಾ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು ಸಮಾಜದಲ್ಲಿ ರಚನಾತ್ಮಕ ಕಾರ್ಯಗಳಿಗೆ ಸದ್ವಿನಿಯೋಗ ಮಾಡಿಕೊಳ್ಳಲು ಅವರು ಕರೆ ನೀಡಿದರು.

ಮಾಜಿ ಶಾಸಕ ಬಿ.ಜಿ. ಜಮಖಂಡಿ ಮಾತನಾಡಿ ಸಂಘಟನೆಗಳು ಸಮಾಜದ ಏಳ್ಗೆಗಾಗಿ ರಚನಾತ್ಮಕ ಕಾರ್ಯಗಳನ್ನು ಮಾಡಲು ಕರೆ ನೀಡಿದರು. ಪಂಚಮಸಾಲಿ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗಲೀಕರ ಮಾತನಾಡಿ ಇದೇ 28ರಂದು ಬಾಗಲಕೋಟೆ ಯಲ್ಲಿ ಆಯೋಜಿಸಲಾಗಿರುವ ಜಿಲ್ಲಾಮಟ್ಟದ ಕಿತ್ತೂರು ಚನ್ನಮ್ಮನ 190ನೇ ವಿಜಯೋತ್ಸವದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು. ಮಲ್ಲಪ್ಪ ಕೌಜಲಗಿ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಅಪ್ಪಾಸಾಹೇಬ ಬೆಳಗಲಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಅರ್ಜುನಗೌಡ ಪಾಟೀಲ, ಸದಸ್ಯ ಸಂಗಪ್ಪ ಹಲ್ಲಿ, ಸಂತೋಷ ಹುದ್ದಾರ, ವಿಜಯಕುಮಾರ ಪುಜಾರಿ, ಎಸ್.ಪಿ. ದಾನಪ್ಪಗೋಳ, ರಾಮಣ್ಣ ಮುಗಳಖೋಡ, ಮಲ್ಲಪ್ಪ ಶೀರೋಳ, ನಿಂಗಪ್ಪ ಬಾಳಿಕಾಯಿ, ಮಹಾಲಿಂಗಪ್ಪ ಲಾತೂರ, ರಾಮಚಂದ್ರ ಪಾತ್ರೋಟ, ಜಿ.ಎಂ. ಪೂಜೇರಿ, ಪ್ರಭು ಪಾಲಭಾವಿ, ಪುಂಡಲೀಕ ಪೂಜೇರಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಪ್ರಾ.ಎಸ್.ಎಂ.ಉಳ್ಳೇಗಡ್ಡಿ, ಡಾ.ಬಿ.ಎಂ. ಪಾಟೀಲ, ಶ್ರೀಶೈಲಪ್ಪ ವಜ್ಜರಮಟ್ಟಿ, ಯಲ್ಲಪ್ಪ ಕುಳಲಿ, ದುಂಡಪ್ಪ ಇಂಗಳಗಿ, ಬಸವರಾಜ ಪುರಾಣಿಕ, ಬಸವರಾಜ ಸುಣಧೋಳಿ, ಶ್ರೀಶೈಲಪ್ಪ ಉಳ್ಳೇಗಡ್ಡಿ, ದುಂಡಪ್ಪ ನಂದೆಪ್ಪನವರ, ವಿಜಯಕುಮಾರ ಕುಳಲಿ, ಹನಮಂತ ಶಿರೋಳ, ಚನ್ನಪ್ಪ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.