ADVERTISEMENT

13ರಿಂದ ಹಳ್ಳಿಯ ಕಡೆಗೆ ನಡಿಗೆ: ಯತ್ನಾಳ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 4:30 IST
Last Updated 3 ಜೂನ್ 2011, 4:30 IST

ವಿಜಾಪುರ: ಜೆಡಿಎಸ್ ವಿಧಾನಸಭಾ ಮತಕ್ಷೇತ್ರಗಳ ಅಧ್ಯಕ್ಷರು ಹಾಗೂ ವೀಕ್ಷಕರು ತಕ್ಷಣವೇ ತಮ್ಮ ಘಟಕಗಳ ಪೂರ್ಣ ಪ್ರಮಾಣದ ಸಮಿತಿ ರಚಿಸಿ ಸಂಘಟನೆಯನ್ನು ಚುರುಕುಗೊಳಿಸ ಬೇಕು ಎಂದು ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಗುರುವಾರ ಇಲ್ಲಿಯ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳು, ಮುಖಂಡರ ಸಭೆಯಲ್ಲಿ ಮಾತನಾಡಿದರು.

`ಹಳ್ಳಿಯ ಕಡೆಗೆ ನಡಿ~ ಕಾರ್ಯಕ್ರಮಕ್ಕೆ ಇದೇ 13ರಂದು ನಗರದಲ್ಲಿ ಚಾಲನೆ ನೀಡಲಾಗುವುದು. ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ಮಾಜಿ ಸಚಿವ ಬಸವರಾಜ ಹೊರಟ್ಟಿ ಇತರರು ಪಾಲ್ಗೊಳ್ಳುವರು ಎಂದರು.
ಜೆಡಿಎಸ್‌ನ ವಿವಿಧ ಘಟಕಗಳ ಜಿಲ್ಲಾ ಅಧ್ಯಕ್ಷರಾದ ಸಿದ್ದು ಕಾಮತ, ಎಸ್.ಎಸ್. ಖಾದ್ರಿ ಇನಾಮದಾರ, ರೇಷ್ಮಾ ಪಡೇಕನೂರ, ಎಂ.ಜಿ. ಮಠಪತಿ, ಪ್ರಭು ದೇಸಾಯಿ, ಆನಂದ ಔದಿ, ಆರ್.ಎ. ನಿಕ್ಕಂ, ಎಸ್.ಎಲ್. ಪಾಟೀಲ, ಗುಂಡಬಾವಡಿ, ವಿವೇಕಾನಂದ ಹಳ್ಳಿ, ಅಬ್ದುಲ್‌ಸತ್ತಾರ ಇನಾಮದಾರ, ಆರ್.ಎಸ್. ಡೊಮನಾಳ, ಎಚ್.ಡಿ. ಹೆರಕಲ್ ಮಾತನಾಡಿದರು.

ಪಕ್ಷದ ಮುಖಂಡ ವಿಜಯಕುಮಾರ ಎಸ್. ಪಾಟೀಲ, ಎಂ.ಸಿ. ಮುಲ್ಲಾ, ಎಂ.ಎ. ಕಾಲೇಬಾಗ, ದಾನಪ್ಪ ಕಟ್ಟಿಮನಿ, ರಾಜಪಾಲ ಚವ್ಹಾಣ ವೇದಿಕೆಯಲ್ಲಿದ್ದರು.ಅಡಿವೆಪ್ಪ ಕಡಿ, ಪ್ರಕಾಶ ಹಿರೇಕುರುಬರ, ಚನ್ನಪ್ಪ ಕೊಪ್ಪದ, ಶ್ರೀಪತಿಗೌಡ ಬಿರಾದಾರ, ಯಾಕೂಬ ಜತ್ತಿ, ಬಸಣ್ಣ ಮಾಡಗಿ, ಆರ್.ಬಿ. ಪಾಟೀಲ, ಶಿವಾನಂದ ಮಖಣಾಪುರ, ಮೈನು ಬಕ್ಷಿ, ಹಾಲಣ್ಣವರ, ಬೆಳ್ಳುಂಡಗಿ, ಜಿ.ಆರ್. ಜೋಶಿ ಇತರರು ಪಾಲ್ಗೊಂಡಿದ್ದರು.
ದ್ರಕಾಂತ ಹಿರೇಮಠ ಸ್ವಾಗತಿಸಿದರು. ವೆಂಕಟೇಶ ಪದ್ಮಾಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.