ಬಾದಾಮಿ: ಭಾನುವಾರ ಬೆಳಿಗ್ಗೆ 10 ರಿಂದ ಸಂಜೆಯವರೆಗೂ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಹೊರಗೆ ಯಾರೂ ಬಾರದಂತೆ ಮನೆಯಲ್ಲಿಯೇ ಜನರನ್ನು ದಿಗ್ಬಂಧನ ಮಾಡಿದಂತಿತ್ತು.
ರಸ್ತೆಯೆಲ್ಲ ಮಳೆಗೆ ಕೆಸರುಮಯವಾಗಿ ಪಾದಚಾರಿಗಳು ಪರದಾಡುವಂತಾಗಿದೆ. ವಾರದಿಂದ ರೈತರ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ.
ಗ್ರಾಮೀಣ ಪ್ರದೇಶದ ಜನರು ಬಾರದ ಕಾರಣ ವ್ಯಾಪಾರ ವಹಿವಾಟು ಕಡಿಮೆಯಾಗಿದೆ ಎಂದು ಪಟ್ಟಣದ ವರ್ತಕರು ಹೇಳಿದರು.
ಮಳೆಗೆ ತಾಲ್ಲೂಕಿನಲ್ಲಿ ಇಲ್ಲಿವರೆಗೆ 39 ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ ಎಂದು ಕಂದಾಯ ಇಲಾಖೆ ತಿಳಿಸಿದೆ. ಜಿಟಿಜಿಟಿ ಮಳೆ ಹೀಗೆಯೇ ಮುಂದುವರಿದರೆ ಮಣ್ಣಿನ ಮಾಳಿಗೆಯ ಮನೆಗಳು ಹಾನಿಯಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.