ADVERTISEMENT

‘ಭಗವದ್ಗೀತೆ ಎಲ್ಲ ಧರ್ಮಗಳ ತಾಯಿಬೇರು’

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:44 IST
Last Updated 14 ಜನವರಿ 2018, 8:44 IST
ರಬಕವಿಯ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 150ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವೇಕ ಸಂಭ್ರಮ ಕಾರ್ಯಕ್ರಮದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ ಸಂಪಾದಿಸಿದ ‘ಅನುಭಾವದಂಗಳ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ರಬಕವಿಯ ಬ್ರಹ್ಮಾನಂದ ಆಶ್ರಮದಲ್ಲಿ ಬ್ರಹ್ಮಾನಂದ ಶಿವಯೋಗಿಗಳ 150ನೇ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಂಡಿದ್ದ ವಿವೇಕ ಸಂಭ್ರಮ ಕಾರ್ಯಕ್ರಮದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ ಸಂಪಾದಿಸಿದ ‘ಅನುಭಾವದಂಗಳ’ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.   

ರಬಕವಿ ಬನಹಟ್ಟಿ: ‘ಭಗವದ್ಗೀತೆ ಎಲ್ಲ ಧರ್ಮಗಳ ತಾಯಿ ಬೇರು ಎಂಬುದನ್ನು ಜಗತ್ತಿಗೆ ತಿಳಿಸಿದವರು ಸ್ವಾಮಿ ವಿವೇಕಾನಂದರು. ವಿವೇಕ ಎಂದರೆ ವಿಶ್ವಕ್ಕೆ ವೇದಗಳನ್ನು ಕಾಣಿಸಿದವರು’ ಎಂದು ನೆಲಮಂಗಲ ತಾಲ್ಲೂಕಿನ ಹೆಗ್ಗುಂದದ ವನಕಲ್ಲುಮಲ್ಲೇಶ್ವರ ಸಂಸ್ಥಾನದ ಮಠದ ಡಾ.ಬಸವರಮಾನಂದ ಸ್ವಾಮೀಜಿ ನುಡಿದರು.

ಸ್ಥಳೀಯ ಬ್ರಹ್ಮಾನಂದ ಅಶ್ರಮದಲ್ಲಿ ಶುಕ್ರವಾರ ಬ್ರಹ್ಮಾನಂದ ಶಿವಯೋಗಿಗಳ 150ನೇ ಜಯಂತಿ ಉತ್ಸವ ಮತ್ತು ಮಕರ ಸಂಕ್ರಮಣದ ನಿಮಿತ್ತ ಹಮ್ಮಿಕೊಳ್ಳಲಾದ ವಿವೇಕ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವಿವೇಕಾನಂದರು ಬಲಾಢ್ಯ ಶಕ್ತಿ, ವಿಚಾರಗಳ ಜೊತೆಗೆ ವಿಶಾಲ ಮನಸ್ಸು ಹೊಂದಿದ್ದರು. ಧಾರ್ಮಿಕತೆಯಲ್ಲಿ ಜಗತ್ತನ್ನು ಗೆದ್ದವರಾಗಿದ್ದರು. ಜೀವನದಲ್ಲಿ ಸಂತರ, ಅನುಭಾವಿಗಳ, ಶರಣ ಆದರ್ಶಗಳನ್ನು ಅಳವಡಿಸಿಕೊಂಡರೆ ಮನಸ್ಸು ವಿಶಾಲವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಇದೇ ಸಂದರ್ಭದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ ಸಂಪಾದನೆ ಮಾಡಿದ ಅನುಭಾವದಂಗಳ ಪುಸ್ತಕ ಕುರಿತು ಶಿವಾನಂದ ದಾಶ್ಯಾಳ ಮಾತನಾಡಿ, ‘ಪುಸ್ತಕಗಳು ನಮ್ಮ ಜ್ಞಾನವನ್ನು ವಿಸ್ತಾರ ಮಾಡುತ್ತವೆ ಮತ್ತು ಬದುಕುವ ಮಾರ್ಗವನ್ನು ತಿಳಿಸುತ್ತವೆ’ ಎಂದರು.

ಕಾರ್ಯಕ್ರಮದಲ್ಲಿ ತೇರದಾಳದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎನ್‌.ವಿ.ಅಸ್ಕಿ, ಜಮಖಂಡಿ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಮಾತನಾಡಿದರು.

ಅವರಾದಿಯ ಫಲಹಾರೇಶ್ವರ ಸಂಸ್ಥಾನದ ಮಠದ ಶಿವಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನರಸೀಪುರದ ಶರಣ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಸುರೇಬಾನದ ಎಸ್‌.ಎಸ್‌.ಬೆಂಡಿಗೇರಿಮಠ, ಅವರಾದಿಯ ಪಂಡಿತಗೌಡ ಪಾಟೀಲರನ್ನು, ಪ್ರಮೀಳಾ ಪೂಜಾರ, ಮಲ್ಲೇಶಪ್ಪ ಕುಚನೂರ, ಬಾಗವ್ವ ಮಿರ್ಜಿ, ಶಾಂತಾ ಸೋರಗಾವಿ, ಬುದ್ದಪ್ಪ ಕುಂದಗೋಳ, ರಾಮಣ್ಣ ಕುಲಗೋಡ, ಎಂ.ಎಸ್‌.ಬಾದಾಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ವೀಣಾ ಮತ್ತು ವಿದ್ಯಾ ಜತ್ತಿ ಸಹೋದರಿಯರು ನೃತ್ಯ ಪ್ರದರ್ಶನ ಮಾಡಿದರು. ಗುರುಸಿದ್ಧೇಶ್ವರ ಸ್ವಾಮೀಜಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಿರೀಶ ಮುತ್ತೂರ ನಿರೂಪಿಸಿದರು. ವೀರೂಪಾಕ್ಷಯ್ಯ ಮಠದ ವಂದಿಸಿದರು.

ಕಾರ್ಯಕ್ರಮದಲ್ಲಿ ಡಾ.ಜಿ.ಎಚ್‌.ಚಿತ್ತರಗಿ, ಶಿವಾನಂದ ಬಾಗಲಕೋಟಮಠ, ಶ್ರೀಪಾದ ಬಾಗಲಕೋಟ, ಮಲ್ಲಿಕಾರ್ಜುನ ಜತ್ತಿ, ಬಲದೇವ ಸಾಬೋಜಿ, ಮಹಾದೇವಪ್ಪ ಮುತ್ತೂರ, ಪ್ರೊ.ವೈ.ಬಿ.ಕೊರಡೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.