ADVERTISEMENT

‘ಮಹನೀಯರ ಸ್ಮರಣೆಯಿಂದ ಮೌಢ್ಯ ದೂರ’

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:58 IST
Last Updated 2 ಫೆಬ್ರುವರಿ 2018, 8:58 IST

ಕೂಡಲಸಂಗಮ: ‘ಯೌವ್ವನ ಇರುವುದು ದೇಹ ಪ್ರೇಮಕ್ಕಲ್ಲ, ದೇಶ ಪ್ರೇಮಕ್ಕೆ, ದೇಶದ ಒಳಿತಿಗೆ’ ಎಂದು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಿವೇಕವಂಶಿ ಹೇಳಿದರು.

ಕೂಡಲಸಂಗಮದ ಜೈ ಹಿಂದ್ ಯುವಶಕ್ತಿ ಹಾಗೂ ಹಿಂದೂ ಜಾಗರಣ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್‌ ಚಂದ್ರಬೋಸ್ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ದೇಶದ, ಸಮಾಜದ ಅಭ್ಯುದಯಕ್ಕೆ ತಮ್ಮ ಜೀವನ ಅರ್ಪಣೆ ಮಾಡಿದವರು ನಿಜವಾದ ನಾಯಕರು. ಮಹನೀಯರ ಜಯಂತಿ ಮೂಲಕ ದೇಶದ ಮೌಢ್ಯ ತೊಲಗಿಸಬೇಕು. ಜಗತ್ತಿನ ಸಂಕಷ್ಟಗಳಿಗೆ ಚರಿತ್ರೆಯುದ್ದಕ್ಕೂ ಭಾರತ ಸ್ಪಂದಿಸಿದೆ’ ಎಂದರು.

ADVERTISEMENT

ಸಿಪಿಐ ಸಂಗಮೇಶ ಶಿವಯೋಗಿ ಮಾತನಾಡಿ, ‘ಯುವಕರು ವಾಸ್ತವತೆ, ಭ್ರಮೆಯ ನಡುವೆ ಇರುವ ಕಂದಕದ ಭೀಕರತೆಯನ್ನು ತಿಳಿಯಬೇಕು. ಇಂದಿನ ಯುವ ಜನಾಂಗಕ್ಕೆ ನಿಜವಾದ ಮೌಲ್ಯಗಳನ್ನು ತಿಳಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು’ ಎಂದರು.

ಎ.ಎಂ.ಅತ್ತಾರ ಮಾತನಾಡಿದರು. ವೇದಿಕೆಯಲ್ಲಿ ವರ್ತಕ ಬಸವರಾಜ ಗೌಡರ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಶರಣಪ್ಪ ಗಾಣಗೇರ, ಸಿದ್ದು ಹಡಪದ, ಅಖಂಡೇಶ ಪತ್ತಾರ ಇದ್ದರು. ಸಿದ್ದರಾಮಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ಗಾಣಗೇರ ಸ್ವಾಗತಿಸಿದರು. ಮಹಾಂತೇಶ ಎಮ್ಮಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.