ಗುಳೇದಗುಡ್ಡ: ತಾಲ್ಲೂಕಿನ ಕೆಲವಡಿ ಗ್ರಾಮದ ಆರಾಧ್ಯ ದೈವ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದ ರಥದ ನೂತನ ಹಗ್ಗದ ಭವ್ಯ ಮೆರವಣಿಗೆ ಕೆಲವಡಿ ಗ್ರಾಮದಲ್ಲಿ ಬಹಳಷ್ಟು ಸಡಗರ, ಸಂಭ್ರಮದಿಂದ ಗುರುವಾರ ಜರುಗಿತು.
ವೀರಾಪುರ ಗ್ರಾಮದ ಮುಖಂಡ ರಂಗನಾಥ ಹನುಮಂತ ನಾಯ್ಕರ ಅವರು ಕೊಡ ಮಾಡಿದ ದೇವಸ್ಥಾನದ ರಥದ ಈ ನೂತನ ಹಗ್ಗದ ಮೆರವಣಿಗೆ ಕೆಲವಡಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದಿಂದ ಶ್ರೀಲಕ್ಷ್ಮೀ ರಂಗನಾಥಸ್ವಾಮಿ ದೇವಸ್ಥಾನದವರೆಗೆ ಕರಡಿ ಮಜಲು, ಮಹಿಳೆಯರ ಕುಂಭ ಕಳಸಾರಥಿ ಹೀಗೆ ಹಲವು ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿತು.
ನೂತನ ಹಗ್ಗದ ಈ ಭವ್ಯ ಮೆರವಣಿಗೆಯಲ್ಲಿ ಲಕ್ಷ್ಮೀ ರಂಗನಾಥ ದೇವಸ್ಥಾನದ ಅರ್ಚಕರಾದ ಹನುಮಂತ ಗಚ್ಚೆಪ್ಪ ಪೂಜಾರ, ರಂಗನಾಥ ಕುಲಕರ್ಣಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಜ್ಯೋತಿ ಪೂಜಾರ, ಗ್ರಾ.ಪಂ. ಸದಸ್ಯ ಅಡಿವೆಪ್ಪ ಹಡಗಲಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಲೋಕೇಶ್ ಉಂಡಗೇರಿ, ಪ್ರಕಾಶ ಪೂಜಾರ, ಶಿವಪುತ್ರಪ್ಪ ಕಾತರಕಿ, ಬಸವನಗೌಡ ಗೌಡರ, ಕೆಲೂಡೆಪ್ಪ ಪಾಟೀಲ, ಪುಂಡಲಿಕ ಮುತ್ತಲಗೇರಿ, ಗಣೇಶ ಮೇದಾರ, ಕಲ್ಲಪ್ಪ ನರಗುಂದ, ಹನುಮಂತ ನಾಯ್ಕರ, ಹನುಮಂತ ತಳವಾರ, ರಾಮಾರೂಡ ಗೌಡರ, ಶಶಿ ಪೂಜಾರ, ರಂಗಪ್ಪ ತಳವಾರ್ ರಂಗಪ್ಪ ಜಿಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.