ADVERTISEMENT

ಲೋಕಾಪುರ: ಮಳೆಗಾಗಿ ಗೊಂಬೆಗಳ ಮದುವೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 13:45 IST
Last Updated 3 ಜೂನ್ 2023, 13:45 IST
ಲೋಕಾಪುರ ಸಮೀಪದ ವರ್ಚಗಲ್ ಗ್ರಾಮದಲ್ಲಿ ಮಳೆಗಾಗಿ ಗೊಂಬೆಗಳ ಮದುವೆ ಮಾಡಲಾಯಿತು
ಲೋಕಾಪುರ ಸಮೀಪದ ವರ್ಚಗಲ್ ಗ್ರಾಮದಲ್ಲಿ ಮಳೆಗಾಗಿ ಗೊಂಬೆಗಳ ಮದುವೆ ಮಾಡಲಾಯಿತು    

ಲೋಕಾಪುರ: ಸಮೀಪದ ವರ್ಚಗಲ್ ಗ್ರಾಮದಲ್ಲಿ ಮಳೆಗಾಗಿ ಗೊಂಬೆಗಳ ಮದುವೆ ಮಾಡಲಾಯಿತು.

ಮದುವೆಯಲ್ಲಿ ನಡೆಯುವ ಎಲ್ಲ ಕೈಂಕರ್ಯಗಳನ್ನು ಮಾಡಿ, ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿದ್ದರು. ಇಡಿ ಗ್ರಾಮವೇ ಮದುವೆಗೆ ಸಾಕ್ಷಿಯಾಗಿತ್ತು. ಚಿಕ್ಕ ಮಕ್ಕಳ ಕೈಯಲ್ಲಿ ಗೊಂಬೆಗಳನ್ನು ಕೊಟ್ಟು ಅವರ ಕೈಯಲ್ಲಿ ಮದುವೆ ಮಾಡಿಸಲಾಯಿತು.

ವಧುವಿನ ಕಡೆ ಮತ್ತು ವರನ ಕಡೆಯಿಂದ ಬೀಗರನ್ನು ಎದುರುಕೊಳ್ಳುವ ಕಾರ್ಯದಿಂದ ಪ್ರಾರಂಭವಾದ ಕಾರ್ಯ ವಧುವನ್ನು ಗಂಡನ ಮನೆಗೆ ಕಳಿಸುವವರೆಗೆ ಸಂಪ್ರದಾಯವಾಗಿ ಮದುವೆ ಮಾಡಲಾಯಿತು. ಮಳೆಗಾಗಿ ಇಂತಹ ಪದ್ಧತಿ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡ ಜಯಪ್ಪಗೌಡ ಪಾಟೀಲ ಹೇಳಿದರು.

ADVERTISEMENT

ಮಹಾಲಿಂಗಪ್ಪ ಕಟ್ಟಿ, ಮುಂಡಲೀಕ ಮುತ್ತಣ್ಣವರ, ರಂಗಪ್ಪ ಪಾಟೀಲ, ಚಂದವ್ವ ಚಿಕ್ಕೂರ, ರೇಣವ್ವ ಕಂಬಾರ, ಪ್ರಕಾಸ ತಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.