ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಮತ್ತು ರಾಂಪುರದ ನೀಲಕಂಠೇಶ್ವರ ಮಠದಲ್ಲಿ ನಡೆದ ಇ-ಖಾತಾ ಅಭಿಯಾನಕ್ಕೆ ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ ಭಾನುವಾರ ಚಾಲನೆ ನೀಡಿದರು.
ರಬಕವಿ ಬನಹಟ್ಟಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರು ಇ-ಖಾತಾ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಆಸ್ತಿಗಳ ಅಧಿಕೃತ ಮಾಲೀಕರು ತಮ್ಮ ಆಸ್ತಿಗೆ ಸಂಬಂಧಪಟ್ಟಂತೆ ಖರೀದಿ ಪತ್ರ, ದಾನ ಪತ್ರ, ಚಾಲ್ತಿಯಲ್ಲಿರುವ ಋಣಭಾರ ಪ್ರಮಾಣ ಪತ್ರ, ಮನೆ, ನೀರಿನ ಕರ ತುಂಬಿದ ಪಾವತಿಗಳು, ಆಧಾರ ಚೀಟಿ ಮತ್ತು ಆಸ್ತಿಯ ಭಾವಚಿತ್ರಗಳನ್ನು ಅರ್ಜಿಗೆ ಲಗತ್ತಿಸಿ ಎ ಮತ್ತು ಬಿ ಖಾತೆಯ ಡಿಜಿಟಲ್ ಪತ್ರ ಪಡೆಯಬೇಕು ಎಂದು ತಿಳಿಸಿದರು.
ಆಸ್ತಿ ಮಾಲೀಕರು ಇ- ಆಸ್ತಿಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆಗಳು ಇದ್ದರೆ ನಗರಸಭೆಯ ಕಂದಾಯ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆಯ ಸದಸ್ಯ ಶಿವಾನಂದ ಬುದ್ನಿ, ಅಭಿನಂದನ ಸೋನಾರ, ವಸಂತ ಪವಾರ, ಮುತ್ತಣ್ಣ ಚೌಡಕಿ, ಸುನೀಲ ಬಬಲಾದಿ, ಶಿವಪುತ್ರ ಮೂಡಲಗಿ, ಮುಜಾವರ, ಮೊಕಾಶಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.