ADVERTISEMENT

ಭಾರತಿ ವಿಷ್ಣುವರ್ಧನ್‌ಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:52 IST
Last Updated 7 ಜನವರಿ 2026, 20:52 IST
ಭಾರತಿ ವಿಷ್ಣುವರ್ಧನ್
ಭಾರತಿ ವಿಷ್ಣುವರ್ಧನ್   

ಅಮೀನಗಡ (ಬಾಗಲಕೋಟೆ ಜಿಲ್ಲೆ): ‘ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ’ಗೆ ಬಹುಭಾಷಾ ನಟಿ ಭಾರತಿ ವಿಷ್ಣುವರ್ಧನ ಮತ್ತು ‘ಸಿದ್ಧಶ್ರೀ ರಾಜ್ಯ ಪ್ರಶಸ್ತಿ’ಗೆ ಹಿರಿಯ ರಂಗ ಕಲಾವಿದೆ ಮಾಲತಿ ಸುಧೀರ್ ಅವರನ್ನು ಆಯ್ಕೆ ಮಾಡಲಾಗಿದೆ.

‘ಜನವರಿ 14 ರಿಂದ 16ರವರೆಗೆ ಸಿದ್ಧನಕೊಳ್ಳದಲ್ಲಿ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿದ್ದು, ಜನವರಿ 15ರಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಸಿದ್ಧನಕೊಳ್ಳದ ಧರ್ಮಾಧಿಕಾರಿ ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.

ಮಾಲತಿ ಸುಧೀರ್