ADVERTISEMENT

ಛಲದೊಂದಿಗೆ ಉನ್ನತ ಗುರಿ ಸಾಧಿಸಿ: ಸಂಪನ್ಮೂಲ ತರಬೇತುದಾರ ಕಲಬುರ್ಗಿಯ ಡಾ.ದರ್ಗಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 15:19 IST
Last Updated 26 ಫೆಬ್ರುವರಿ 2021, 15:19 IST
ಬೀದರ್‌ನ ಗುರುನಾನಕ ಪ್ರಥಮ ದರ್ಜೆ ವಿಜ್ಞಾನ, ವಾಣಿಜ್ಯ ಕಾಲೇಜಿನಲ್ಲಿ ‘ನೆರೆಹೊರೆ ಯುವ ಸಂಸತ್ತು’ ಕಾರ್ಯಾಗಾರದಲ್ಲಿ ಗುರುನಾನಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ದೀಪ ಬೆಳಗಿಸಿದರು. ಮಯೂರಕುಮಾರ ಗೋರ್ಮೆ, ಡಾ.ದರ್ಗಾ, ಅಬ್ದುಲ್ ಶಫಿ ಅಹಮದ್ ಇದ್ದರು

ಬೀದರ್‌: ‘ಯುವಕರು ಛಲದೊಂದಿಗೆ ಉನ್ನತ ಗುರಿ ಸಾಧಿಸಲು ಪ್ರಯತ್ನಿಸಬೇಕು’ ಎಂದು ಸಂಪನ್ಮೂಲ ತರಬೇತುದಾರ ಕಲಬುರ್ಗಿಯ ಡಾ.ದರ್ಗಾ ಹೇಳಿದರು.

ನಗರದ ಗುರುನಾನಕ ಪ್ರಥಮ ದರ್ಜೆ ವಿಜ್ಞಾನ, ವಾಣಿಜ್ಯ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಯುವ ರೆಡ್‌ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಸಹಾರಾ ಯುವಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ನೆರೆಹೊರೆ ಯುವ ಸಂಸತ್ತು’ ಒಂದು ದಿನದ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

‘ಕಳೆದು ಹೋದ ಸಮಯವನ್ನು ಮತ್ತೆ ಮರಳಿ ಪಡೆಯಲಾಗದು. ಯುವಕರು ಸಮಯಕ್ಕೆ ಮಹತ್ವ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಗುರುನಾನಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿದರು.ಕಾರ್ಯಕ್ರಮ ಅಧಿಕಾರಿ ಅಬ್ದುಲ್ ಶಫಿ ಅಹಮದ್ ನೇತೃತ್ವ ವಹಿಸಿದ್ದರು. ಮಯೂರಕುಮಾರ ಗೋರ್ಮೆ ಕಾರ್ಯಾಗಾರ ನಡೆಸಿಕೊಟ್ಟರು. ಪ್ರಾಚಾರ್ಯ ಶ್ಯಾಮಲಾ ದತ್ತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.