ADVERTISEMENT

ಹವಾನಿಯಂತ್ರಿತ ಬಸ್‌ಗಳಲ್ಲಿ ಹಾಸಿಗೆ–ಹೊದಿಕೆ ಇಲ್ಲ

ವಾಯವ್ಯ ಸಾರಿಗೆ ಸಂಸ್ಥೆ: ನಾಲ್ಕು ದಿನಗಳಲ್ಲಿ ₹1.20 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 12:42 IST
Last Updated 16 ಮಾರ್ಚ್ 2020, 12:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ವಾಯವ್ಯ ಸಾರಿಗೆ ಸಂಸ್ಥೆ ತನ್ನ ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಹಾಸಿಗೆ ಹಾಗೂ ಹೊದಿಕೆ ಕೊಡುವುದನ್ನು ಸೋಮವಾರದಿಂದ ನಿಲ್ಲಿಸಿದೆ.

’ಸಂಸ್ಥೆಯ ಎಲ್ಲಾ 165 ಐಷಾರಾಮಿ ಬಸ್‌ಗಳಲ್ಲೂ ಅನಿರ್ದಿಷ್ಟ ಅವಧಿಯವರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಮನೆಯಿಂದಲೇ ಹಾಸಿಗೆ ಹಾಗೂ ಹೊದಿಕೆ ತರಬೇಕು‘ ಎಂದು ವಾಯವ್ಯ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗೀಯ ನಿಯಂತ್ರಕ ಬಸವರಾಜ ಅಮ್ಮಣ್ಣವರ ತಿಳಿಸಿದರು.

₹1.20 ಕೋಟಿ ನಷ್ಟ:ಕೊರೊನಾ ವೈರಸ್ ಹರಡುವಿಕೆ ಮುನ್ನೆಚ್ಚರಿಕೆ ಸಂಬಂಧ ರಾಜ್ಯ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದ ನಂತರ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಕಳೆದ ನಾಲ್ಕು ದಿನಗಳಲ್ಲಿ ಸಂಸ್ಥೆಗೆ ₹1.20 ಕೋಟಿ ನಷ್ಟವಾಗಿದೆ. ಶೇ 15ರಷ್ಟು ಮಾರ್ಗಗಳಲ್ಲಿ ಬಸ್ ಓಡಾಟ ನಿಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸ್ಪಂದನೆ ಗಮನಿಸಿ ಪುನಃ ಬಸ್ ಓಡಾಟ ಆರಂಭಿಸಲಾಗುವುದು ಎಂದು ಹುಬ್ಬಳ್ಳಿಯ ವಾಯವ್ಯ ಸಾರಿಗೆ ಸಂಸ್ಥೆ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ ’ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.