
ಪ್ರಜಾವಾಣಿ ವಾರ್ತೆ
ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದ ವಿರಕ್ತಮಠದಿಂದ ಅಕ್ಕಮಹಾದೇವಿ ಜಯಂತಿ ಅಂಗವಾಗಿ ಪ್ರತಿ ವರ್ಷ ನೀಡುವ ‘ಅಕ್ಕ ಪ್ರಶಸ್ತಿ’ಗೆ ಬಾವಿ ಗೌರಮ್ಮ ಎಂದೇ ಖ್ಯಾತಳಾದ ಶಿರಸಿಯ ಗೌರಿ ಸಿ. ನಾಯ್ಕ ಅವರು ಭಾಜನರಾಗಿದ್ದಾರೆ.
ಏಕಾಂಗಿಯಾಗಿ ಬಾವಿಗಳನ್ನು ತೋಡಿ ಮನೆಗೆ, ಅಂಗನವಾಡಿ ಮಕ್ಕಳಿಗೆ ನೀರಿನ ಆಸರೆಯಾಗಿ ನಿಂತ 57 ವರ್ಷ ವಯಸ್ಸಿನ ಗೌರಮ್ಮ ಅವರ ಏಕಾಂಗಿ ಸಾಹಸಕ್ಕೆ ಈ ಪ್ರಶಸ್ತಿ ಅರಸಿಕೊಂಡು ಬಂದಿದೆ. ಏ. 23 ರಂದು ಬೆಳಿಗ್ಗೆ 9ಕ್ಕೆ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿರಕ್ತಮಠದ ಪ್ರಭು ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.