
ಪ್ರಜಾವಾಣಿ ವಾರ್ತೆ
ಬಾಗಲಕೋಟೆ: ಚಾಲುಕ್ಯ ಉತ್ಸವ ಕಾರ್ಯಕ್ರಮಕ್ಕಾಗಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ತಮ್ಮ ಸ್ವವಿವರ, ಕಲಾಪ್ರಕಾರ ಹಾಗೂ ಪ್ರದರ್ಶನಕ್ಕೆ ಅಗತ್ಯ ಸಮಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅರ್ಜಿಯನ್ನು chalukyautsava@gmail.com ಗೆ ಕಳುಹಿಸಬೇಕು.
ಮೇಲ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿ.5 ರೊಳಗೆ ಬಾದಾಮಿಯ ತಹಶೀಲ್ದಾರ್ ಕಚೇರಿ ಮತ್ತು ಬಾಗಲಕೋಟೆಯ ನವನಗರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಬೇಕು. ಇಲಾಖೆಯ ಮಾರ್ಗಸೂಚಿಯನ್ವಯ ಕಲಾವಿದರ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.