ADVERTISEMENT

ಮುಧೋಳ | ಅಂಗವಿಕಲ ಮಕ್ಕಳಿಗೆ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:27 IST
Last Updated 31 ಡಿಸೆಂಬರ್ 2025, 6:27 IST
ಮುಧೋಳದ ತುಳಜಾಭವಾನಿ ಶೈಕ್ಷಣಿಕ ಹಾಗೂ ಗ್ರಾಮಿಣ ಅಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಮಕ್ಕಳಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮ ನಡೆಯಿತು  
ಮುಧೋಳದ ತುಳಜಾಭವಾನಿ ಶೈಕ್ಷಣಿಕ ಹಾಗೂ ಗ್ರಾಮಿಣ ಅಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಮಕ್ಕಳಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮ ನಡೆಯಿತು     

ಮುಧೋಳ: ಎಪಿಡಿ ಸಂಸ್ಥೆ ಬೆಂಗಳೂರು ಹಾಗೂ ನಗರದ ತುಳಜಾಭವಾನಿ ಶೈಕ್ಷಣಿಕ ಹಾಗೂ ಗ್ರಾಮಿಣ ಅಭಿವೃದ್ದಿ ಸಂಸ್ಥೆಯ ಸಹಯೋಗದಲ್ಲಿ ಶೀಘ್ರ ಪತ್ತೆ ಹಚ್ಚುವಿಕೆ ಮತ್ತು ಆರಂಭಿಕ ಶಿಕ್ಷಣ ಮಕ್ಕಳಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿವೃತ್ತ ಡಿ.ಡಿ.ಡಬ್ಲೂ ಎಸ್.ಎಸ್.ಬೆಳಗಲಿ ಮಾತನಾಡಿ ಸಂಸ್ಥೆಯು ಕಳೆದ 10 ವರ್ಷಗಳಿಂದ ಅಂಗವಿಕಲ ಮಕ್ಕಳಿಗೆ ಹಲವು ಯೋಜನೆ ರೂಪಿಸಿ ಕೆಲಸ ಮಾಡುತ್ತ ಬಂದಿದೆ. ಇಂತಹ ಮಕ್ಕಳು ಸಾಧನ ಸಲಕರಣೆ ಉಪಯೋಗಿಸುವುದರಿಂದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಬರುತ್ತದೆ. ಈ ಸಲಕರಣೆ ಉಪಯೋಗಿಸಿ ಭವಿಷ್ಯದಲ್ಲಿ ಬದಲಾವಣೆ ಕಾಣಬೇಕು ಎಂದು ಅಂಗವಿಕಲ ಮಕ್ಕಳ ಪಾಲಕರಿಗೆ ಸಲಹೆ ನೀಡಿದರು.

23 ಮಕ್ಕಳಿಗೆ ಸಾಧನ ಸಲಕರಣೆ ವಿತರಿಸಲಾಯಿತು.

ADVERTISEMENT

ಗೋವಿಂದ ಪೂಜಾರಿ, ಎಪಿಡಿ ಸಂಸ್ಥೆಯ ಚೇತನ ಪಾಟೀಲ, ಗೀತಾ ಪಾಟೀಲ, ಲಕ್ಷ್ಮಿ ಮಾದನಶೆಟ್ಟಿ ಮಾತನಾಡಿದರು. ರಮೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ರಾಘು ಹೂಗಾರ, ಕಾಶವ್ವ ಅರಕೇರಿ, ಶ್ರೀಶೈಲ ಯಂಡಿಗೇರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.