ADVERTISEMENT

ಕುಳಗೇರಿ ಕ್ರಾಸ್: ತಂಬಾಕು ವ್ಯಸನಿಗಳಿಗೆ ಗುಲಾಬಿ ಹೂ ನೀಡಿ ಜಾಗೃತಿ

​ಪ್ರಜಾವಾಣಿ ವಾರ್ತೆ
Published 31 ಮೇ 2025, 12:51 IST
Last Updated 31 ಮೇ 2025, 12:51 IST
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕುಳಗೇರಿ ಕ್ರಾಸ್‌ನ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸಲಾಯಿತು
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕುಳಗೇರಿ ಕ್ರಾಸ್‌ನ ಬಸ್ ನಿಲ್ದಾಣದಲ್ಲಿ ಜಾಗೃತಿ ಮೂಡಿಸಲಾಯಿತು    

ಕುಳಗೇರಿ ಕ್ರಾಸ್: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಯಿಂದ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.

ತಂಬಾಕು ಸೇವಿಸುವವರಿಗೆ ಗುಲಾಬಿ ಹೂ ನೀಡಿ ತಂಬಾಕು ಸೇವಿಸದಂತೆ, ಅಂಗಡಿ ವ್ಯಾಪಾರಸ್ಥರಿಗೆ ತಂಬಾಕು ಮಾರಾಟಕ್ಕೆ ಕಡಿವಾಣ ಹಾಕುವಂತೆ ತಿಳಿಸಲಾಯಿತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಾಸುದೇವರಾವ್ ಅರಕೇರಿ ಮಾತನಾಡಿ, ‘ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಅರಿವಿದ್ದರೂ ಅನೇಖ ಯುವಕರು ತಂಬಾಕು ಸೇವನೆ ಮಾಡುತ್ತಿರುವುದು ದುರಾದೃಷ್ಟಕರ. ತಂತ್ರಜ್ಞಾನ ಬೆಳೆದಂತೆ, ಯುವಪೀಳಿಗೆಗೂ ರೋಗಗಳಿಗೆ ತುತ್ತಾಗುತ್ತಿರುವುದು ಹೆಚ್ಚಿದೆ. ಜನರು ಜಾಗೃತರಾಗಬೇಕು. ಮಾದಕ ವ್ಯಸನದಿಂದ ದೂರ ಇರಬೇಕು’ ಎಂದು ತಿಳಿಸಿದರು.

ADVERTISEMENT

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಐ. ಅಂಗಡಿ, ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಬಿ.ಎಸ್. ಎತ್ತಿನಮನಿ, ಎ.ಎ.ಕಮತಗಿ, ಆರೋಗ್ಯ ಸುರಕ್ಷತಾಧಿಕಾರಿ ಎಸ್.ಐ. ಬನ್ನೂರ, ಎಸ್.ಎಫ್. ಯಕ್ಕಪ್ಪನವರ, ಅಕ್ಷತಾ ಬಡಿಗೇರ, ಸಮುದಾಯ ಆರೋಗ್ಯಾಧಿಕಾರಿ ಧರಿಯಪ್ಪ ನಾಯ್ಕರ, ಜ್ಯೋತಿ ಸೋಮಾಪುರ, ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.