ADVERTISEMENT

ಸಂಜೆ ಮೊಬೈಲ್, ಟಿವಿ ಬಳಸಬೇಡಿ: ಪೋಷಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:05 IST
Last Updated 7 ಫೆಬ್ರುವರಿ 2026, 7:05 IST
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಬಾದಾಮಿ ಜಿ.ಎಂ. ಕಲ್ಯಾಣಶೆಟ್ಟಿ ಪ್ರೌಢ ಶಾಲೆಯ ಶಿಕ್ಷಕರು ಚಿಕ್ಕಮುಚ್ಚಳಗುಡ್ಡ ಗ್ರಾಮದ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾರ್ಗದರ್ಶನ ನೀಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಬಾದಾಮಿ ಜಿ.ಎಂ. ಕಲ್ಯಾಣಶೆಟ್ಟಿ ಪ್ರೌಢ ಶಾಲೆಯ ಶಿಕ್ಷಕರು ಚಿಕ್ಕಮುಚ್ಚಳಗುಡ್ಡ ಗ್ರಾಮದ ವಿದ್ಯಾರ್ಥಿಗಳ ಮನೆಗೆ ತೆರಳಿ ಮಾರ್ಗದರ್ಶನ ನೀಡಿದರು.   

ಬಾದಾಮಿ: ‘ಮಕ್ಕಳ ಅಧ್ಯಯನಕ್ಕಾಗಿ ಮನೆಯಲ್ಲಿ ಪ್ರತಿನಿತ್ಯ ರಾತ್ರಿ 7ರಿಂದ 9ಗಂಟೆವರೆಗೆ ಮನೆಯಲ್ಲಿ ಟಿ.ವಿ. ಮೊಬೈಲ್ ಬಳಸಬೇಡಿ’ ಎಂದು ಶಿಕ್ಷಕರು ಪೋಷಕರಿಗೆ ಸಲಹೆ ನೀಡಿದರು.

ಜಿ.ಎಂ. ಕಲ್ಯಾಣಶೆಟ್ಟಿ ಪ್ರೌಢಶಾಲೆಯ ಶಿಕ್ಷಕರು ಗುರುವಾರ ಚಿಕ್ಕಮುಚ್ಚಳಗುಡ್ಡ ಗ್ರಾಮದ ಮನೆಗಳಿಗೆ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪ ಇರುವುದರಿಂದ ವಿದ್ಯಾರ್ಥಿಗಳ ಓದಿನ ಕಡೆಗೆ ಕಾಳಜೀ ವಹಿಸಿ ಎಂದು ಪೋಷಕರಿಗೆ ಸಲಹೆ ವ್ಯಕ್ತಪಡಿಸಿದರು.

‘ಶಾಲೆಯಿಂದ ಶಿಕ್ಷಕರು ನಿಮ್ಮ ಮೊಬೈಲ್ ಗೆ ಯಾವುದೇ ಮ್ಯಾಸೇಜ್ ಕಳಿಸುವುದಿಲ್ಲ. ಮಕ್ಕಳನ್ನು ಓದಲು ಹಚ್ಚಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಪ್ರೇರೇಪಿಸಿ’ ಎಂದು ಶಿಕ್ಷಕ ಬಿ.ಎಲ್. ಹೂಲಿ ಹೇಳಿದರು.

ADVERTISEMENT

ಪರೀಕ್ಷೆ ಮುಗಿಯುವವರೆಗೆ ಟಿ.ವಿ ಮತ್ತು ಮೊಬೈಲ್ ಬಳಕೆ ಮಾಡುವುದಿಲ್ಲ. ಮಕ್ಕಳಿಗೂ ಕೊಡುವುದಿಲ್ಲ ಎಂದು ಪೋಷಕರು ಭರವಸೆ ನೀಡಿದರು. ಶಿಕ್ಷಕ ಎಂ.ಆರ್. ಪಾಟೀಲ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.