ಬಾದಾಮಿ: ಶರನ್ನವರಾತ್ರಿ ಅಂಗವಾಗಿ ಧಾರ್ಮಿಕ ಪುಣ್ಯಕ್ಷೇತ್ರ ಬನಶಂಕರಿ ದೇವಾಲಯದಲ್ಲಿ ಅ.3 ರಿಂದ ಅ. 12ರ ವರೆಗೆ ದೇವಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ದೇವಾಲಯದ ಟ್ರಸ್ಟ್ ಸಮಿತಿ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ. 3 ರಂದು ನವರಾತ್ರಿ ಆರಂಭ ಘಟಸ್ಥಾಪನೆ, ಅ. 7 ರಂದು ಲಲಿತಾ ಪಂಚಮಿ, ಅ. 10 ರಂದು ದುರ್ಗಾಷ್ಟಮಿ ರಾತ್ರಿ ನವಚಂಡಿ ಹವನ ಪ್ರಾರಂಭ, ಅ. 11 ರಂದು ಮಹಾನವಮಿ ಸೂರ್ಯೋದಯಕ್ಕೆ ಹವನದ ಪೂರ್ಣಾಹುತಿ ಖಂಡೇಪೂಜೆ ಹಾಗೂ ಆಯುಧ ಪೂಜೆ, ಅ. 12 ರಂದು ವಿಜಯ ದಶಮಿ ಶಮೀಪೂಜೆ ಬನ್ನಿಮುಡಿಯುವುದು, ಅ. 17 ರಂದು ಶೀಗಿ ಹುಣ್ಣಿಮೆ ಅಂಗವಾಗಿ ದೇವಿಗೆ ವಿಶೇಷ ಪೂಜೆ ಅಲಂಕಾರ ನಡೆಯಲಿದೆ.
ಅ.3 ರಂದು ಘಟಸ್ಥಾಪನೆ ಮತ್ತು ದೇವಾಲಯದ ಸ್ವಚ್ಛತಾ ಕಾರ್ಯದ ಪ್ರಯುಕ್ತ ಅ. 3 ರಂದು ಬೆಳಿಗ್ಗೆ 9 ರಿಂದ ಸಂಜೆ 4ರ ವರೆಗೆ ಧರ್ಮದರ್ಶನ ಮತ್ತು ಯಾವುದೇ ಸೇವೆಗೆ ಅವಕಾಶವಿಲ್ಲ ಭಕ್ತರು ಸಹಕರಿಸಬೇಕು. ಧರ್ಮದರ್ಶನ ಮತ್ತು ವಿಶೇಷ ಸೇವೆಗಳು ಸಂಜೆ 4 ರ ನಂತರ ಪ್ರಾರಂಭವಾಗುತ್ತವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.