ADVERTISEMENT

ರಬಕವಿ ಬನಹಟ್ಟಿ | ಸದಾಶಿವ ಮುತ್ಯಾನ ಜಾತ್ರೆ ಆಗಸ್ಟ್‌ 12ಕ್ಕೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 14:14 IST
Last Updated 7 ಆಗಸ್ಟ್ 2024, 14:14 IST
ಇದೇ 9 ರಂದು ಚಂದ್ರಗಿರಿದೇವಿ, ಸದಾಶಿವ ಮುತ್ಯಾನ ಜಾತ್ರೆ
ಇದೇ 9 ರಂದು ಚಂದ್ರಗಿರಿದೇವಿ, ಸದಾಶಿವ ಮುತ್ಯಾನ ಜಾತ್ರೆ   

ರಬಕವಿ ಬನಹಟ್ಟಿ: ತಾಲ್ಲೂಕಿನ ನಾವಲಗಿ ಗ್ರಾಮದ ಚಂದ್ರಗಿರಿದೇವಿ ಮತ್ತು ಸದಾಶಿವ ಮುತ್ಯಾನ ಜಾತ್ರೆ  ಆ.12ರಂದು ನಡೆಯಲಿದೆ.

ಜಾತ್ರೆಯ ಅಂಗವಾಗಿ ಟಗರಿನ ಕಾಳಗ, ಎತ್ತಿನ ಗಾಡಿ, ಕುದರಿ ಗಾಡಿಗಳ ಓಟ, ಕಲ್ಲು ಎತ್ತುವ, ತುಂಬಿದ ಚೀಲ ಎತ್ತುವ, ಗುಂಡು ಎತ್ತುವ, ಕಲ್ಲು ಎತ್ತುವ ಸ್ಪರ್ಧೆಗಳು ಸೇರಿದಂತೆ ಭಜನಾ ಪದಗಳು, ಚೌಡಕಿ ಹಾಡುಗಳು ಕಾರ್ಯಕ್ರಮ ನಡೆಯಲಿವೆ.

ಆ.11 ರಂದು ಚಂದ್ರಗಿರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ದೇವಿಗೆ ಅಭಿಷೇಕ ಕಳಸೋತ್ಸವ ನಡೆಯಲಿದೆ. 12 ರಂದು ಬೆಳಿಗ್ಗೆ 10 ರಿಂದ ರಥೋತ್ಸವದವರೆಗೆ ಕರಡಿ, ಸಂಬಾಳ, ಖನಿ, ಶಹನಾಯಿ, ಸಂಪ್ರದಾಣಿ ಹಾಗೂ ಡೊಳ್ಳಿನ ವಾದನಗಳ ಪ್ರದರ್ಶನ ನಿರಂತರವಾಗಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.