ADVERTISEMENT

ತೇರದಾಳ | ಅಗ್ನಿಶಾಮಕ ದಳದ ಠಾಣೆ: ಸರ್ವೆ ಕಾರ್ಯ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 13:31 IST
Last Updated 4 ಜುಲೈ 2025, 13:31 IST
ತೇರದಾಳದಲ್ಲಿ ನಿರ್ಮಾಣವಾಗಲಿರುವ ಅಗ್ನಿಶಾಮಕ ದಳದ ಠಾಣೆಯ ಜಾಗದ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು
ತೇರದಾಳದಲ್ಲಿ ನಿರ್ಮಾಣವಾಗಲಿರುವ ಅಗ್ನಿಶಾಮಕ ದಳದ ಠಾಣೆಯ ಜಾಗದ ಸರ್ವೆ ಕಾರ್ಯದಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು   

ತೇರದಾಳ: ಇಲ್ಲಿನ ಅಗ್ನಿಶಾಮಕ ದಳದ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಸರ್ಕಾರ ₹ 3 ಕೋಟಿ ಅನುದಾನ ಮಂಜೂರುಗೊಳಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಪ್ರಾರಂಭಿಸುವ ಉದ್ದೇಶದಿಂದ ಕಂದಾಯ ಇಲಾಖೆ ಸರ್ವೆ ಅಧಿಕಾರಿಗಳು ಗುರುವಾರ ಸರ್ವೆ ಪ್ರಾರಂಭಿಸಿದರು.

ಹನಗಂಡಿ ಗ್ರಾಮದ ಸರ್ವೆ ನಂ 13ರಲ್ಲಿ ತೇರದಾಳ ಅಗ್ನಿಶಾಮಕ ದಳಕ್ಕೆ ಎರಡು ಎಕರೆ ಜಾಗ ನೀಡಲಾಗಿದೆ. ಈ ಸರ್ವೆ ಸಂಖ್ಯೆಯಲ್ಲಿ ಸಾಕಷ್ಟು ಜಾಗ ಇರುವುದರಿಂದ ಅಗ್ನಿಶಾಮಕ ದಳಕ್ಕೆ ನೀಡಿರುವ ಜಾಗದ ಸರಹದ್ದು ಗುರುತಿಸುವ ಕೆಲಸ ಈಗ ನಡೆಯಿತು.

ಸರ್ವೆ ಕಾರ್ಯದಲ್ಲಿ ಕಂದಾಯ ನಿರೀಕ್ಷಕ ಪಿ.ಆರ್. ಮಠಪತಿ, ಸರ್ವೆ ಅಧಿಕಾರಿ ಮುಂಡಾಸ್, ರಬಕವಿ-ಬನಹಟ್ಟಿ ಅಗ್ನಿಶಾಮಕ ದಳದ ಠಾಣಾಧಿಕಾರಿ ರಮೇಶ ಚೌವಟೆ, ವಿರೂಪಾಕ್ಷ ದುಪದಾಳ, ಮಾರುತಿ ರಾಠೋಡ, ಮಂಜುನಾಥ ತಳವಾರ, ಶಿವಾನಂದ ಮೈಲಾಪುರೆ, ಕಿರಣ ಬಿಸನಾಳ, ಅರಣ್ಯ ಇಲಾಖೆಯ ಲಕ್ಷ್ಮಣ ಪಾಟೀಲ, ಪುರಸಭೆ ಸದಸ್ಯ ಕಾಶಿನಾಥ ರಾಠೋಡ, ಮುಖಂಡ ಗೌತಮ ರೋಡಕರ, ಶಂಕರ ಕುಂಬಾರ, ಶಿವಾನಂದ ಕಾಂಬಳೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.