ADVERTISEMENT

ಬಾಗಲಕೋಟೆ: ಪಂಚಮಸಾಲಿ ಪೀಠದ ಕಟ್ಟಡಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 23:25 IST
Last Updated 14 ಜುಲೈ 2025, 23:25 IST
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿನ ಪಂಚಮಸಾಲಿ ಪೀಠದ ಕಟ್ಟಡಕ್ಕೆ ಗೇಟ್ ಅಳವಡಿಸಿ, ಬೀಗ ಹಾಕಿರುವುದು
ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿನ ಪಂಚಮಸಾಲಿ ಪೀಠದ ಕಟ್ಟಡಕ್ಕೆ ಗೇಟ್ ಅಳವಡಿಸಿ, ಬೀಗ ಹಾಕಿರುವುದು   

ಬಾಗಲಕೋಟೆ: ಕೂಡಲಸಂಗಮದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ಗೆ ಸೇರಿದ ಪಂಚಮಸಾಲಿ ಪೀಠ ಬಸವ ಜಯಮೃತ್ಯುಂಜಯ ಸ್ವಾಮಿ ಇರುವ ಪೀಠದ ಕಟ್ಟಡದ ಗೇಟಿಗೆ ಭಾನುವಾರ ರಾತ್ರಿ ಬೀಗ ಹಾಕಲಾಗಿದೆ. ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪೀಠದ ಕಟ್ಟಡದ ಪ್ರವೇಶ, ಹಿಂಬದಿ ದ್ವಾರ ಮತ್ತು ಮೇಲ್ಭಾಗದ ಕೊಠಡಿಗೆ ತೆರಳಲು ಇದ್ದ ದಾರಿಯಲ್ಲಿ ಗೇಟ್‌ ಅಳವಡಿಸಿ, ಬೀಗ ಹಾಕಲಾಗಿದೆ. ಮಠದ ದ್ವಾರಗಳಿಗೆ ಯಾರು ಬೀಗ ಹಾಕಿದ್ದಾರೆ ಎಂಬುದು ಗೊತ್ತಿಲ್ಲ.  ಆದರೆ, ತಿಂಗಳಿನಿಂದ ವ್ಯವಸ್ಥಾಪಕರಾಗಿದ್ದವರು ಬೀಗ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

‘ಪೀಠಕ್ಕೆ ಬೀಗ ಹಾಕಿದ ಬಗ್ಗೆ ಮಾಹಿತಿ ಇಲ್ಲ. ಹಲವು ದಿನಗಳಿಂದ ಪ್ರವಾಸದಲ್ಲಿದ್ದು, ಪೀಠದ ಕಡೆ ಬಂದಿಲ್ಲ’ ಎಂದು ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದರು.

ADVERTISEMENT

‘ಮಠದಲ್ಲಿ ಅಹಿತಕರ ಚಟುವಟಿಕೆಗಳು ನಡೆಯದಿರಲಿ ಎಂಬ ಉದ್ದೇಶದಿಂದ ಗೇಟ್ ಮಾಡಿಸಿ, ಬೀಗ ಹಾಕಲಾಗಿದೆ. ಮಠದ ಟ್ರಸ್ಟ್ ಅಧ್ಯಕ್ಷನಾಗಿರುವ ಕಾರಣ ಮಠದ ಸುರಕ್ಷತೆ ನನ್ನ ಜವಾಬ್ದಾರಿ. ಸ್ವಾಮೀಜಿಗೆ ಹೇಳಿ ಮಾಡುವಂತದ್ದಲ್ಲ. ಭದ್ರತೆ ದೃಷ್ಟಿಯಿಂದ ಕ್ರಮಕೈಗೊಳ್ಳಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.